SHIVAMOGGA LIVE NEWS | 20 ಮಾರ್ಚ್ 2022
ಶಿವಮೊಗ್ಗದ ತುಂಗಾ ನದಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದೆ. ವಿಚಾರ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಲ್ಲೇಶ್ವರ ನಗರದ ಶ್ರೀ ಮಾಸ್ತಾಂಬಿಕ ದೇವಿ ದೇವಸ್ಥಾನದ ಹಿಂಭಾಗ ತುಂಗಾ ನದಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮಹಿಳೆ ಮತ್ತು ಪುರುಷನ ಮೃತದೇಹಗಳು ಅಕ್ಕಪಕ್ಕದಲ್ಲಿವೆ. ಮಹಿಳೆಯ ಮೃತದೇಹದ ಮೇಲೆ ಹಸಿರು ಸೀರೆ ಇದೆ. ಪುರುಷನ ಮೃತದೇಹದ ಮೇಲೆ ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಇದೆ ಎಂದು ತಿಳಿದು ಬಂದಿದೆ.
ಮೃತರ ಗುರುತು ಪತ್ತೆಯಾಗಿಲ್ಲ. ಮೃತದೇಹಗಳನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೋಟೆ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200