ಮನೆ ತಲುಪುವ ಹೊತ್ತಿಗೆ ಎದುರಿಗೆ ಬಂತು ಬೈಕ್‌, LBS ನಗರದಲ್ಲಿ ಕೇಸ್‌, ಮಹಿಳೆಯರೆ ಹುಷಾರ್‌

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 9 APRIL 2024

SHIMOGA : ಬೈಕ್‌ ಸವಾರನೊಬ್ಬ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದಾನೆ. ಶಿವಮೊಗ್ಗದ ಎಲ್‌ಬಿಎಸ್‌ ನಗರದಲ್ಲಿ ಘಟನೆ ಸಂಭವಿಸಿದೆ. ಸ್ಥಳೀಯರಾದ ರೇಣುಕಾ ಅವರು ಗಾಂಧಿ ನಗರದಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುವಾಗ ಘಟನೆ ಸಂಭವಿಸಿದೆ.

ರೇಣುಕಾ ಅವರು ಎಲ್‌ಬಿಎಸ್‌ ನಗರ ರಸ್ತೆಯಲ್ಲಿ ರಾತ್ರಿ 9.30ರ ಹೊತ್ತಿಗೆ ನಡೆದು ಹೋಗುತ್ತಿದ್ದಾಗ ಘಟನೆಯಾಗಿದೆ. ಎದುರಿನಿಂದ ಬೈಕ್‌ನಲ್ಲಿ ಬಂದ ಯುವಕನೊಬ್ಬ ಅವರ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್‌ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭ ವ್ಯಾನಿಟಿ ಬ್ಯಾಗ್‌ ಎಳೆದ ರಭಸಕ್ಕೆ ರೇಣುಕಾ ಅವರು ಕೆಳಗೆ ಬಿದ್ದಿದ್ದಾರೆ. ಬೈಕ್‌ ಸವಾರ ಕೂಡ ಆಯಾತಪ್ಪಿ ಬಿದ್ದಿದ್ದಾನೆ ಎಂದು ಆರೋಪಿಸಲಾಗಿದೆ.

ಬಳಿಕ ರೇಣುಕಾ ಅವರ ಬಳಿ ಬಂದ ಯುವಕ ಕೈಯ್ಯಲ್ಲಿದ್ದ ವ್ಯಾನಿಟಿ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದಾನೆ. ಅದರಲ್ಲಿ 10 ಸಾವಿರ ರೂ. ನಗದು, ಮೊಬೈಲ್‌ ಫೋನ್‌, ಎಟಿಎಂ ಕಾರ್ಡ್‌ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ನಿಲ್ದಾಣದಲ್ಲಿ ಬಸ್ಸಿನಲ್ಲಿ 15 ನಿಮಿಷ ನಿದ್ರೆ, ಎದ್ದಾಗ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಶಾಕ್, ಆಗಿದ್ದೇನು?

Leave a Comment