SHIVAMOGGA LIVE NEWS | 28 NOVEMBER 2022
ಶಿಕಾರಿಪುರ : 1 ಲಕ್ಷ ರೂ. ಹಣ ಕೊಡದಿದ್ದರೆ ವಿಡಿಯೋ, ಫೋಟೊ ವೈರಲ್ (video viral threat) ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕುತ್ತಿದ್ದವನನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಆತನ ಸ್ವಗ್ರಾಮದಲ್ಲಿಯೆ ಹೆಡೆಮುರಿ ಕಟ್ಟಿದ್ದಾರೆ.
ಬಿಹಾರ ರಾಜ್ಯ ಬೈಸಾ ಪೂರ್ಣಿಯಾ ಜಿಲ್ಲೆಯ ಚಕ್ಲ ಗ್ರಾಮದ ರಜರ್ ರಾಜಾ (22) ಬಂಧಿತ. ಈತನನ್ನು ಬಿಹಾರದಲ್ಲಿ ಅರೆಸ್ಟ್ ಮಾಡಿ, ಶಿವಮೊಗ್ಗ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
(video viral threat)
ಏನಿದು ಪ್ರಕರಣ?
ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಮಹಿಳೆಗೆ LIKEY APP ನಲ್ಲಿ ರಜರ್ ರಾಜಾ ಎಂಬಾತನ ಪರಿಚಯವಾಗಿತ್ತು. ಈತನೊಂದಿಗೆ ಚಾಟಿಂಗ್ ಮಾಡುವ ಸಂದರ್ಭ ಮಹಿಳೆ ವಿಡಿಯೋ, ಫೋಟೊಗಳನ್ನು ಷೇರ್ ಮಾಡಿದ್ದರು. ಇದನ್ನು ಉಪಯೋಗಿಸಿಕೊಂಡು ರಜರ್ ರಾಜಾ ಬ್ಲಾಕ್ ಮೇಲ್ ಆರಂಭಿಸಿದ್ದ.
ALSO READ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶದ ವಿಚಾರ, ಸಂಸದ ರಾಘವೇಂದ್ರ ಮಹತ್ವದ ಹೇಳಿಕೆ
1 ಲಕ್ಷ ರೂ. ಹಣ ಕೊಡದಿದ್ದರೆ ವಿಡಿಯೋ, ಫೋಟೊಗಳನ್ನು ನಿಮ್ಮ ಕುಟುಂಬದವರಿಗೆ ಷೇರ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆತಂಕಕ್ಕೀಡಾದ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ತನಿಖೆ ನಡೆಸಿದ ಶಿರಾಳಕೊಪ್ಪ ಪೊಲೀಸರು, ಬಿಹಾರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.