ಶಿವಮೊಗ್ಗ ಲೈವ್.ಕಾಂ | SHIMOGA | 09 ಡಿಸೆಂಬರ್ 2019
ನಿಲ್ಲಿಸಿದ್ದ ಕಾರಿನ ಮ್ಯಾಗ್ ವೀಲ್’ಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಒಂದು ವರ್ಷದ ಬಳಿಕ ಅರೆಸ್ಟ್ ಆಗಿದ್ದಾರೆ. ವಿನೋಬಗರ ಪೊಲೀಸರು ಇವರನ್ನು ಬಂಧಿಸಿದ್ದಾರೆ.
2018ರ ಡಿಸೆಂಬರ್’ನಲ್ಲಿ, ವಿನೋಬನಗರ ಪೊಲೀಸ್ ಚೌಕಿ ಬಳಿಕ ಮ್ಯಾಗ್ ವೀಲ್’ಗಳನ್ನು ಕಳ್ಳತನ ಮಾಡಲಾಗಿತ್ತು. ಆದರೆ ಕಳ್ಳರು ಪತ್ತೆಯಾಗಿರಲಿಲ್ಲ. ಇತ್ತೀಚೆಗೆ ಇದೇ ಕಳ್ಳರು ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಕಳ್ಳರು ಸಿಕ್ಕಿಬಿದ್ದಿದ್ದು ಹೇಗೆ?
ನಾಗೇಂದ್ರ ಕಾಲೋನಿ ರೈಲ್ವೆ ಗೇಟ್ ಬಳಿ ಪಿಎಸ್ಐ ಉಮೇಶ್ ಅವರ ನೇತೃತ್ವದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಇಬ್ಬರು, ಪೊಲೀಸರನ್ನು ಕಂಡ ಕೂಡಲೆ, ಕಾರನ್ನು ಹಿಂದಕ್ಕೆ ತಿರುಗಿಸಿದ್ದಾರೆ. ಅನುಮಾನಗೊಂಡ ಪೊಲೀಸರು ಇಬ್ಬರನ್ನು ಹಿಡಿದು ವಿಚಾರಣೆ ನಡೆಸಿದಾಗಿ ಪ್ರಕರಣಗಳು ಬೆಳಕಿಗೆ ಬಂದಿವೆ.
ಯಾರು ಗೊತ್ತಾ ಈ ಕಳ್ಳರು?
ಬಂಧಿತರು ಭದ್ರಾವತಿಯ ಹಳೆ ನಗರ ವಾಸವಿ ಕಾಲೋನಿ ನಿವಾಸಿಗಳಾಗಿದ್ದಾರೆ. ನಿತಿನ್ ಶೆಟ್ಟಿ (25) ಮತ್ತು ಧರ್ಮ (30) ಎಂದು ಗುರುತಿಸಲಾಗಿದೆ. ಬಂಧಿತರಿಂದ 60 ಸಾವಿರ ಮೌಲ್ಯದ ನಾಲ್ಕು ಮ್ಯಾಗ್ ವೀಲ್’ಗಳು, 2.50 ಲಕ್ಷ ಮೌಲ್ಯದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Vinobanagara Police arrest two Mag Wheel thieves while checking the vehicles in Shimoga today. Mag Wheels were stolen in 2018 near Vinobanagara Police Chowki.