ತೀರ್ಥಹಳ್ಳಿಯ ಆಗುಂಬೆ ರಸ್ತೆಯಲ್ಲಿ ನೆಲಮಾಳಿಗೆಯ ಅಂಗಡಿಗೆ ನುಗ್ಗಿದ ಕಾರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 MAY 2024

THIRTHAHALLI : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಟ್ಟಡವೊಂದರ ನೆಲಮಾಳಿಗೆಗೆ ಬಿದ್ದಿದೆ. ಅದೃಷ್ಟವಶಾತ್‌ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ತೀರ್ಥಹಳ್ಳಿ ಪಟ್ಟಣದ ಅಂಗುಬೆ ರಸ್ತೆಯ ಛತ್ರಕೇರಿ ಮಾರ್ಗದಲ್ಲಿ ಘಟನೆ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಕರ್ನಾಟಕ ಬ್ಯಾಂಕ್‌ ಕಟ್ಟಡದ ನೆಲ ಮಾಳಿಗೆಗೆ ನುಗ್ಗಿದೆ. ಗಜಾನನ ಟೆಕ್ಸ್‌ಟೈಲ್ಸ್‌ ಅಂಗಡಿ ಮುಂಭಾಗ ಉರುಳಿದೆ. ಇದೇ ವೇಳೆ ಬೈಕ್‌ ಒಂದಕ್ಕೆ ಕಾರು ಡಿಕ್ಕಿಯಾಗಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಇದರ ಹೊರತು ಯಾರಿಗೂ ಯಾವುದೇ ಸಮಸ್ಯೆಯಾಗಿಲ್ಲ. ತೀರ್ಥಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ – ಕೋರ್ಟ್‌ ಮೊರೆ ಹೋದ ಈಶ್ವರಪ್ಪ, ಜಯನಗರ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ, ಏನಿದು ಕೇಸ್‌?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment