SHIVAMOGGA LIVE NEWS, 11 DECEMBER 2024
ಶಿಕಾರಿಪುರ : ಗಂಡನೆ ಹೆಂಡತಿಯನ್ನು (Wife) ಭೀಕರವಾಗಿ ಹತ್ಯೆ ಮಾಡಿದ್ದಾನೆ. ಶಿಕಾರಿಪುರ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಮೃತಳನ್ನು ರೇಣುಕಾ (40) ಎಂದು ಗುರುತಿಸಲಾಗಿದೆ.
ಪತಿ ನಾಗರಾಜ್ (45) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು, ಈ ಕುರಿತು ಮಾಧ್ಯಮಗಳಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಪತಿ ನಾಗರಾಜ್ನನ್ನು ವಶಕ್ಕೆ ಪಡೆಯಲಾಗಿದೆ. ವೈಯುಕ್ತಿಕ ಕಾರಣಕ್ಕೆ ಕೃತ್ಯ ನಡೆದಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ. ಶಿಕಾರಿಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ » ಹೆದ್ದಾರಿಯಲ್ಲೇ ಮಂಗಗಳ ಕಾಳಗ, ವಾಹನ ಸಂಚಾರ ಸ್ಥಗಿತ