SHIVAMOGGA LIVE NEWS | 16 MARCH 2024
SORABA : ಹಣದ ವಿಚಾರವಾಗಿ ಪತಿ, ಪತ್ನಿ ಮಧ್ಯೆ ಗಲಾಟೆಯಾಗಿದ್ದು ಗಂಭೀರ ಗಾಯಗೊಂಡಿದ್ದ ಪತ್ನಿ ಮೃತಪಟ್ಟಿದ್ದಾಳೆ. ಸೊರಬ ತಾಲೂಕು ಮಳಲಿಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಚಂದ್ರಾನಾಯಕ್ ಮತ್ತು ಕವಿತಾ ಬಾಯಿ ಮಧ್ಯೆ ಮಾ.9ರಂದು ಹಣದ ವಿಚಾರವಾಗಿ ಗಲಾಟೆಯಾಗಿತ್ತು. ಈ ಸಂದರ್ಭ ಚಂದ್ರಾನಾಯಕ್ ದೊಣ್ಣೆಯಿಂದ ಕವಿತಾ ಬಾಯಿ ಕುತ್ತಿಗೆಗೆ ಹೊಡೆದಿದ್ದ. ಇದರಿಂದ ಕವಿತಾ ಬಾಯಿ ಗಂಭೀರ ಸ್ಥಿತಿಗೆ ತಲುಪಿದ್ದರು. ಅವರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಂದ್ರಾನಾಯಕ್ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ – ಸ್ವತಂತ್ರವಾಗಿ ಸ್ಪರ್ಧೆಯ ನಿರ್ಧಾರ ಪ್ರಕಟಿಸಿದ ಈಶ್ವರಪ್ಪ, ನಿರ್ಧಾರಕ್ಕೆ ಕಾರಣವೇನು?