ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 26 FEBRUARY 2024
SHIMOGA : ಷೇರು ವ್ಯವಹಾರದಲ್ಲಿ ಅತ್ಯಧಿಕ ಲಾಭವಿದೆ ಎಂದು ಆಸೆ ಹುಟ್ಟಿಸಿ ಶಿವಮೊಗ್ಗದ ಗೃಹಿಣಿಯೊಬ್ಬರಿಗೆ 16.42 ಲಕ್ಷ ರೂ. ವಂಚಿಸಲಾಗಿದೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರೇಡಿಂಗ್ ಕುರಿತು ಕೋಚಿಂಗ್ ನೀಡಲಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೇಜ್ ಒಂದರಲ್ಲಿ ಪ್ರಕಟಿಸಲಾಗಿತ್ತು. ಅಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದ ಶಿವಮೊಗ್ಗದ ಗೃಹಿಣಿ (ಹೆಸರು ಗೌಪ್ಯ) ಒಂದು ವಾಟ್ಸಪ್ ಗ್ರೂಪ್ ಸೇರಿದ್ದರು. ಅಲ್ಲಿ ಟ್ರೇಡಿಂಗ್ ಎಂದರೇನು, ಲಾಭ ಪಡೆಯುವುದು ಹೇಗೆ ಎಂಬ ಮಾಹಿತಿ ತಿಳಿಸಲಾಯಿತು. ನಿತ್ಯ ಒಂದೊಂದು ವಿಷಯ ತಿಳಿಸುತ್ತ ಮಹಿಳೆಯಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಜ.12 ರಿಂದ ಫೆ.6ರ ಮಧ್ಯೆ ನಾರ್ಮಲ್ ಟ್ರೇಡಿಂಗ್‌ನಲ್ಲಿ ಶೇ.10ರಷ್ಟು ಲಾಭ, ಬ್ಲಾಕ್ ಟ್ರೇಡಿಂಗ್‌ನಲ್ಲಿ ಶೇ.200ರಷ್ಟು ಲಾಭ ಎಂದು ನಂಬಿಸಲಾಗಿತ್ತು. ಅಂತೆ ಮಹಿಳೆಯಿಂದ 16.42 ಲಕ್ಷ ರೂ. ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ.
ಟ್ರೇಡಿಂಗ್ ಮಾಡುವಾಗ ಇರಲಿ ಎಚ್ಚರ
ಷೇರು ವ್ಯವಹಾರದ ಕುರಿತು ಹಲವರಿಗೆ ಆಸಕ್ತಿ ಇದೆ. ಇದನ್ನೆ ಬಂಡವಾಳ ಮಾಡಿಕೊಂಡು ಕೆಲವರು ವಂಚನೆ ಮಾಡುತ್ತಿದ್ದಾರೆ. ಷೇರು ವ್ಯವಹಾರಕ್ಕೆ ಪ್ರತಿಷ್ಠಿತ ಸಂಸ್ಥೆಗಳು ಏಜೆನ್ಸಿಗಳನ್ನು ಆರಂಭಿಸಿವೆ. ಶಿವಮೊಗ್ಗದಲ್ಲಿಯು ವಿವಿಧ ಸಂಸ್ಥೆಗಳು ಷೇರು ವಹಿವಾಟು ನಡೆಸುತ್ತಿದೆ. ಅಧಿಕೃತ ಸಂಸ್ಥೆಗಳಿಂದ ವಹಿವಾಟು ನಡೆಸಿದರೆ ಹೀಗೆ ವಂಚನೆಗೊಳಗಾಗುವುದು ತಪ್ಪಲಿದೆ.
ಇದನ್ನೂ ಓದಿ – ನಡು ರಸ್ತೆಯಲ್ಲೆ ನಿಂತ ಬಸ್ಸು, ಅದೇ ಮಾರ್ಗದಲ್ಲಿ ಬಂತು ಸಂಸದರ ಕಾರು, ಮುಂದೇನಾಯ್ತು? ಫೋಟೊ ವೈರಲ್
LATEST NEWS
- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು






