ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 12 MARCH 2021
ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬಳ ಹತ್ಯೆ ಮಾಡಿ, ಅಪಘಾತ ಎಂದು ಬಿಂಬಿಸಿದ್ದ ಮೂವರ ಹೆಡೆಮುರಿ ಕಟ್ಟುವಲ್ಲಿ ತೀರ್ಥಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಮ್ಮರಡಿಯ ರವೀಶ್ (32), ಆದರ್ಶ (31) ಮತ್ತು ಚಿಕ್ಕಮಗಳೂರಿನ ಮೂಡಿಗೆರೆಯ ಸಂದೀಪ್ (30) ಬಂಧಿತರು. ತನಿಖೆ ನಡೆಸಿದ ಪೊಲೀಸರಿಗೆ ಇದು ಅಪಘಾತವಲ್ಲ, ಕೊಲೆ ಎಂಬ ಸಂಶಯ ಮೂಡಿತ್ತು.
ಏನಿದು ಪ್ರಕರಣ? ಹತ್ಯೆಗೇನು ಕಾರಣ?
ಫೆಬ್ರವರಿ 26ರಂದು ಕೊಪ್ಪ ರಸ್ತೆಯ ಜಟ್ಟಿನಮಕ್ಕಿ ಗ್ರಾಮದ ಬಳಿ ಅಪಘಾತ ಸಂಭವಿಸಿ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ ನೇತ್ರಾವತಿ (39) ಮೃತಪಟ್ಟಿದ್ದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ಮೇಲ್ನೋಟಕ್ಕೆ ಇದು ಕೊಲೆ ಎಂಬ ಶಂಕೆ ಮೂಡಿತ್ತು.
ಕೆಲವು ವರ್ಷದ ಹಿಂದೆ ನೇತ್ರಾವತಿ ಅವರ ಪತಿ ಲೋಕೇಶ್ ಮೃತಪಟ್ಟಿದ್ದರು. ಅನುಕಂಪದ ಆಧಾರದ ಮೇಲೆ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಸಿಕ್ಕಿತ್ತು. ಈ ವೇಳೆ ಕಮ್ಮರಡಿಯ ರವೀಶ್ ಎಂಬಾತನ ಪರಿಚಯವಾಗಿತ್ತು. ಆತ ಮದುವೆಯಾಗುವುದಾಗಿ ನೇತ್ರಾವತಿಯನ್ನು ನಂಬಿಸಿದ್ದ.
ಫೆಬ್ರವರಿ 25ರ ರಾತ್ರಿ ಮದುವೆ ವಿಚಾರ ಮಾತನಾಡಲು ಒಬ್ಬಳೆ ಬರುವಂತೆ ರವೀಶ್ ತಿಳಿಸಿದ್ದ. ರವೀಶನ ಜೊತೆಗೆ ಮಾತನಾಡಲು ತೆರಳುವ ಮುನ್ನ, ನೇತ್ರಾವತಿ ತನ್ನ ಕುಟುಂಬದವರಿಗೆ ಈ ವಿಚಾರ ತಿಳಿಸಿದ್ದಳು.
ರವೀಶನ ಮಾತು ನಂಬಿ ಹೋಗಿದ್ದ ನೇತ್ರಾವತಿ ತಲೆಗೆ ರಾಡ್ನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಜಟ್ಟಿನ ಮಕ್ಕಿ ಬಳಿ ನೇತ್ರಾವತಿಯ ಬೈಕನ್ನು ಪಲ್ಟಿ ಹೊಡೆದ ಸ್ಥಿತಿಯಲ್ಲಿ ಇರಿಸಿ, ಮೃತದೇಹವನ್ನು ಪಕ್ಕದಲ್ಲಿ ಇರಿಸಿ ಪರಾರಿಯಾಗಿದ್ದರು.
ತನಿಖೆ ತೀವ್ರಗೊಳಿಸಿದಾಗ ಕಮ್ಮರಡಿಯ ರವೀಶನ ಕೈವಾಡದ ಶಂಕೆ ಮೂಡಿತು. ವಿಚಾರಣೆ ತೀವ್ರಗೊಳಿಸಿದಾಗದ ತಪ್ಪೊಪ್ಪಿಕೊಂಡಿದ್ದಾನೆ. ಆತನೊಂದಿಗೆ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200