ಶಿವಮೊಗ್ಗ: ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಚಿನ್ನದ ಸರ ನಾಪತ್ತೆ ಆಗಿದೆ. ಪ್ರತಿಭಟನೆ ನಂತರ ಪೊಲೀಸ್ ಅಧಿಕಾರಿಗೆ ಚಿನ್ನದ ಸರ (Gold Chain) ನಾಪತ್ತೆಯಾಗಿರುವುದು ಗೊತ್ತಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಕೋಟೆ ಪೊಲೀಸ್ ಠಾಣೆಯ ಎಎಸ್‌ಐ ಅಮೃತಾ ಬಾಯಿ ಅವರ ಕೊರಳಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ, ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ, ಕಾರಣವೇನು?
ಪ್ರತಿಭಟನೆ ವೇಳೆ ನೂಕುನುಗ್ಗಲು ಉಂಟಾಗಿತ್ತು. ನಂತರ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನಕ್ಕೆ ಹತ್ತಿಸಲಾಯಿತು. ಪ್ರತಿಭಟನೆ ಮುಗಿದು ಬ್ಯಾರಿಕೇಡ್‌ಗಳ ತೆರವು ಮಾಡುವ ಸಂದರ್ಭ ಎಎಸ್‌ಐ ಅಮೃತಾ ಬಾಯಿ ಅವರ ಕೊರಳಲ್ಲಿದ್ದ ಚಿನ್ನದ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. ಕಣ್ಣೀರು ಹಾಕುತ್ತಲೆ ಹಿರಿಯ ಅಧಿಕಾರಿಗಳಿಗೆ ಅಮೃತಾ ಬಾಯಿ ಮಾಹಿತಿ ನೀಡಿದರು.
LATEST NEWS
- ಶಿವಮೊಗ್ಗಕ್ಕೆ ಡಿಜಿಪಿ ಅಲೋಕ್ ಕುಮಾರ್, ಕೇಂದ್ರ ಕಾರಾಗೃಹಕ್ಕೆ ಭೇಟಿ

- ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿದ ವ್ಯಕ್ತಿ ಸಾವು, ಎರಡು ಭಾಗವಾದ ದೇಹ

- ಒಂದು ಮೆಸೇಜ್, ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ₹6.50 ಲಕ್ಷ ಮಾಯ, ಏನಿತ್ತು ಮೆಸೇಜ್ನಲ್ಲಿ?

- ಸಂಸದ ರಾಘವೇಂದ್ರ ಕಾರಿಗೆ ಮತ್ತೊಂದು ಕಾರು ಡಿಕ್ಕಿ, ಆಗಿದ್ದೇನು?

- ಅರಬಿಳಚಿ ದುರಂತ, ಭದ್ರಾ ನಾಲೆಯಲ್ಲಿ ಎರಡನೇ ಮೃತದೇಹ ಪತ್ತೆ

About The Editor
ನಿತಿನ್ ಆರ್.ಕೈದೊಟ್ಲು





