SHIVAMOGGA LIVE NEWS | 4 APRIL 2024
THIRTHAHALLI : ಪ್ರಸಿದ್ಧ ಹಣಗೆರೆ ಸೌಹಾರ್ದ ಧಾರ್ಮಿಕ ಕೇಂದ್ರ ಹಜರತ್ ಸೈಯದ್ ಸಾದತ್, ಭೂತರಾಯ ಚೌಡೇಶ್ವರಿ ದೇವಸ್ಥಾನದ ಸಮೀಪದ ಲಾಡ್ಜ್ನಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಲಾಡ್ಜ್ ಸಿಬ್ಬಂದಿ ಪರಿಶೀಲನೆ ವೇಳೆ ಕೊಠಡಿಯಲ್ಲಿ ಮಹಿಳೆ ಮೃತಪಟ್ಟಿರುವುದು ಗೊತ್ತಾಗಿದೆ.
ಸುಮಾರು 30 ವರ್ಷದ ಯುವತಿ ಎಂದು ತಿಳಿದು ಬಂದಿದೆ. ಎರಡ್ಮೂರು ದಿನದ ಹಿಂದೆ ಯುವತಿ ಪುರಷನೊಬ್ಬನ ಜೊತೆಗೆ ಲಾಡ್ಜ್ಗೆ ಬಂದು ಕೊಠಡಿ ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಬೋರ್ವೆಲ್ ಕೊರೆಯುವಾಗ ಅಧಿಕಾರಿಗಳ ದಾಳಿ, ಎರಡು ವಾಹನಗಳು ವಶಕ್ಕೆ