SHIVAMOGGA LIVE NEWS | 22 FEBRURARY 2023
BHADRAVATHI : ಸಿದ್ದರಾಮಯ್ಯ ಅವರು 2023ರಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ (Chief Minister) ಎಂದ ಯುವಕನ ಮೇಲೆ ಪರಿಚಯದವರೆ ಹಲ್ಲೆ ನಡೆಸಿದ್ದಾರೆ. ಬಟ್ಟೆ ಹರಿದು, ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ.
ಭದ್ರಾವತಿ ಮಲ್ಲಿಗೇನಹಳ್ಳಿ ಕ್ಯಾಂಪ್ ಬಳಿ ಘಟನೆ ನಡೆದಿದೆ. ಮಲ್ಲಿಗೇನಹಳ್ಳಿಯ ಆಕಾಶ್ (28) ಎಂಬಾತನ ಮೇಲೆ ಹಲ್ಲೆಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
‘ಸಿದ್ದರಾಮಯ್ಯ ಸಿಎಂ ಆಗ್ತಾರೆ’
ಮಲ್ಲಿಗೇನಹಳ್ಳಿ ಕ್ಯಾಂಪ್ ನಿಂದ ಸ್ವಲ್ಪ ದೂರ ಆಕಾಶ್ ಬರುತ್ತಿರುವಾಗ ಐವರು ಪರಿಚಿತರು ಸಿಕ್ಕಿದ್ದಾರೆ. ಅವರೊಂದಿಗೆ ಮಾತನಾಡುವಾಗ 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ (Chief Minister) ಆಗಿದ್ದರು. 2023ರಲ್ಲಿಯು ಅವರೆ ಸಿಎಂ ಆಗಲಿದ್ದಾರೆ ಎಂದು ಆಕಾಶ್ ಪ್ರತಿಪಾದಿಸಿದ್ದಾರೆ. ಆಗ ಎದುರಿಗಿದ್ದ ಐವರು ಕುಮಾರಸ್ವಾಮಿ ಅವರು ಸಿಎಂ ಆಗಲಿದ್ದಾರೆ ಎಂದು ಹೇಳುತ್ತ ಆಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ – ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಮತ್ತೆ ಪೌಡರ್ ಗ್ಯಾಂಗ್ ಪ್ರತ್ಯಕ್ಷ, ಮಹಿಳೆಗೆ ವಂಚನೆ
ಬಟ್ಟೆ ಹರಿದು, ಕಲ್ಲಲ್ಲಿ ಹೊಡೆದರು
ಆಕಾಶ್ ಮೇಲೆ ದಾಳಿ ನಡೆಸಿದ ಐವರು ಟೀ ಶರ್ಟ್ ಹರಿದು ಹಾಕಿದ್ದಾರೆ. ಕಲ್ಲಿನಿಂದ ಹೊಡೆದಿದ್ದಾರೆ. ಅಲ್ಲದೆ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ಆಕಾಶ್ ದೂರಿನಲ್ಲಿ ಆರೋಪಿಸಿದ್ದಾರೆ. ಸ್ಥಳೀಯರು ಬಂದು ಜಗಳ ಬಿಡಿಸಿ, ಆಕಾಶ್ ನನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ‘ರಾತ್ರಿ 11 ಗಂಟೆಗೆ ಮನೆ ಕರೆಂಟ್ ಕಟ್’, SMS ನಂಬಿದ ಶಿವಮೊಗ್ಗದ ಡಾಕ್ಟರ್ ಗೆ ಕಾದಿತ್ತು ದೊಡ್ಡ ಆಘಾತ