ಶಿವಮೊಗ್ಗ KSRTC ಬಸ್ ನಿಲ್ದಾಣ ಸಮೀಪ ಲಾಡ್ಜ್’ನಲ್ಲಿ ಯುವಕನ ಮೃತದೇಹ ಪತ್ತೆ

 SHIVAMOGGA LIVE NEWS 

SHIMOGA |  KSRTC ಬಸ್ ನಿಲ್ದಾಣ ಸಮೀಪ ಲಾಡ್ಜ್ (LODGE) ಒಂದರಲ್ಲಿ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಳೆತ ಸ್ಥತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಕೊಠಡಿಯಲ್ಲಿ ಡೆತ್ ನೋಟ್ ಸಿಕ್ಕಿದೆ.

ಮೃತನನ್ನು ಮಂಜುನಾಥ್ (26) ಎಂದು ಗುರುತಿಸಲಾಗಿದೆ. ಈತ ತುಮಕೂರು (TUMKUR) ಜಿಲ್ಲೆ ಕೆರೆಸೂರಗೊಂಡನಹಳ್ಳಿಯವನು ಎಂದು ತಿಳಿದು ಬಂದಿದೆ.

LODGEಗೆ ಬಂದು ರೂಂ ಬಾಡಿಗೆ

ಸೆ.13ರಂದು ಮಂಜುನಾಥ್ ಲಾಡ್ಜ್’ಗೆ (LODGE) ಬಂದು ರೂಂ ಬಾಡಿಗೆಗೆ ಪಡೆದಿದ್ದ. ಸೆ.15ರಂದು ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೊಠಡಿಯಿಂದ ಬಹು ಸಮಯ ಮಂಜುನಾಥ್ ಹೊರ ಬಂದಿರಲಿಲ್ಲ. ಇನ್ನು, ಕೊಠಡಿಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

Shimoga Nanjappa Hospital

ಪರಿಶೀಲನೆ ನಡೆಸಿದಾಗ ಮಂಜುನಾಥ್ ಮೃತದೇಹ ಕೊಳೆತ ಸ್ಥತಿಯಲ್ಲಿ ಪತ್ತೆಯಾಗಿದೆ. ಕೂಡಲೆ ಮೃತದೇಹವನ್ನು ಶವಾಗಾರಕ್ಕೆ ವರ್ಗಾಯಿಸಿ, ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ.

Kalleshwara-Enterprises.webp

ಡೆತ್ ನೋಟ್ ಪತ್ತೆ, ಏನಿತ್ತು ಅದರಲ್ಲಿ?

ಮಂಜುನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದಾನೆ. ಅದು ಲಭ್ಯವಾಗಿದೆ. ‘ತನ್ನ ದೊಡ್ಡಮ್ಮನ ಮಗಳಾದ ಅಕ್ಕ ಸುಧಾ, ಆಕೆಯ ಸ್ನೇಹಿತನ ಜೊತೆ ಸೇರಿ ಗಂಡನನ್ನು ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಆಕೆಯ ಮೇಲಿನ ಕೋಪದಿಂದ ಆಕೆಯ ಕೊಲೆ ಮಾಡಿ ಬೀದಿ ಹೆಣ ಮಾಡಿರುತ್ತೇನೆ’ ಎಂದು ಡೆತ್ ನೋಟ್’ನಲ್ಲಿ ಬರೆದಿಟ್ಟಿರುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SARJI HOSPITAL

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ಸಿ.ಟಿ.ರವಿ ಫೋಟೊಗೆ ಬೆಂಕಿ, ಸಿದ್ದರಾಮಯ್ಯ ಕಾಲಿಗೆ ಬಿದ್ದು ಕ್ಷಮೆಗೆ ಆಗ್ರಹ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment