ಶಿವಮೊಗ್ಗದ ATMನಲ್ಲಿ ಹಣ ಬಿಡಿಸುತ್ತಿದ್ದಾಗ ಒಳ ನುಗ್ಗಿದ ಯುವಕ, ದುಡ್ಡಿಗಾಗಿ ವ್ಯಕ್ತಿಯ ಅಟ್ಟಾಡಿಸಿ ಅಟ್ಯಾಕ್

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 29 MAY 2024

SHIMOGA : ATMನಲ್ಲಿ ಹಣ ಬಿಡಿಸುತ್ತಿದ್ದಾಗ ಒಳ ನುಗ್ಗಿದ ಯುವಕ ತನಗೆ 2 ಸಾವಿರ ರೂ. ಹಣ ಕೊಡುವಂತೆ ವ್ಯಕ್ತಿಯೊಬ್ಬರಿಗೆ ಬೇಡಿಕೆ ಇಟ್ಟಿದ್ದಾನೆ. ನಿರಾಕರಿಸಿದ್ದಕ್ಕೆ ವ್ಯಕ್ತಿ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿ, ಬಂಗಾರದ ಸರ ಮತ್ತು ಡಾಲರ್‌ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರು ಎಸ್‌ಬಿಐ ಎಟಿಎಂನಲ್ಲಿ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಪ್ರಕಾಶ್‌ ಎಂಬುವವರು ತಮ್ಮ ಪರಿಚಿತರ ಕಾರಿಗೆ ಡ್ರೈವರ್‌ ಆಗಿ ಶಿವಮೊಗ್ಗಕ್ಕೆ ಬಂದಿದ್ದರು. ಕಾರಿಗೆ ಇಂಧನ ಭರ್ತಿ ಮಾಡಿಸುವ ಉದ್ದೇಶದಿಂದ ಹಣ ಬಿಡಿಸಲು ಎಟಿಎಂಗೆ ತೆರಳಿದ್ದರು. ಆಗ ಯುವಕನೊಬ್ಬ ಎಟಿಎಂಗೆ ನುಗ್ಗಿ ತನಗೂ 2 ಸಾವಿರ ರೂ. ಹಣ ಬಿಡಿಸಿಕೊಡುವಂತೆ ಒತ್ತಾಯಿಸಿದ್ದಾನೆ. ಪ್ರಕಾಶ್‌ ನಿರಾಕರಿಸಿದ್ದಾರೆ. ಎಟಿಎಂನಿಂದ ಹೊರ ಬಂದಾಗ ಆ ಯುವಕ ಹಲ್ಲೆಗೆ ಮುಂದಾಗಿದ್ದು, ಪ್ರಕಾಶ್‌ ತಪ್ಪಿಸಿಕೊಂಡು ಪಕ್ಕದ ಸ್ಮಶಾನದ ಕಡೆಗೆ ಓಡಿದ್ದಾರೆ.

ಇದನ್ನೂ ಓದಿ – ರಾತ್ರೋರಾತ್ರಿ ಶೆಡ್‌ನಿಂದ ನಾಲ್ಕು ಕುರಿಗಳು ಮಿಸ್ಸಿಂಗ್‌, ಸಿಸಿಟಿವಿ ಪರಿಶೀಲಿಸಿದಾಗ ಕಾದಿತ್ತು ಆಘಾತ

ಯುವಕನ ಜೊತೆ ಸೇರಿದ ಮೂರ್ನಾಲ್ಕು ಮಂದಿ ಪ್ರಕಾಶ್‌ನನ್ನು ಹಿಡಿದು ಮನಸೋಯಿಚ್ಛೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪ್ರಕಾಶ್‌ ಕೊರಳಲಿದ್ದ 1.84 ಲಕ್ಷ ರೂ. ಮೌಲ್ಯದ ಚಿನ್ನದ ಸರ, ಡಾಲರ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಆಟೋ ಚಾಲಕರು ಮತ್ತು ಸ್ಥಳೀಯರು ಪ್ರಕಾಶ್‌ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಿದ್ದರು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಗಾಂಧಿ ಬಜಾರ್‌ನಲ್ಲಿ ಹಾಡಹಗಲೆ ಮಹಿಳೆಗೆ ಮಂಕು ಕವಿಯುವಂತೆ ಮಾಡಿದ ಕಳ್ಳಿಯರು, ಮುಂದೇನಾಯ್ತು?

Leave a Comment