ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಆಗಸ್ಟ್ 2020
ಹಾಯ್ಹೊಳೆ ಸಮೀಪ ತುಂಗಾ ನದಿ ಚಾನಲ್ನಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಚಾನೆಲ್ನಲ್ಲಿ ಇವತ್ತು ಶೋಧ ಕಾರ್ಯ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಗಿದೆ.
ಹೇಗಾಯ್ತು ಘಟನೆ?
ಪ್ರತೀಶ್ (24) ಮೃತ ಯುವಕ. ಸ್ನೇಹಿತರೊಂದಿಗೆ ಶುಕ್ರವಾರ ಹುಟ್ಟುಹಬ್ಬದ ಆಚರಿಸಲು ತುಂಗಾ ನದಿ ಚಾನಲ್ ಬಳಿ ತೆರಳಿದ್ದರು. ಚಾನೆಲ್ಗೆ ನೀರಿನ ಬಾಟಲ್ ಬಿದ್ದಿದ್ದು, ಅದನ್ನು ಮೇಲೆತ್ತಲು ಹೋದಾಗ ಆಯಾತಪ್ಪಿ ಚಾನಲ್ಗೆ ಬಿದ್ದು, ಕೊಚ್ಚಿ ಹೋಗಿದ್ದರು.
ನಿನ್ನೆಯಿಂದಲೇ ಶೋಧ ಕಾರ್ಯ
ಅಗ್ನಿಶಾಮಕ ತಂಡ, ವಿಪತ್ತು ನಿರ್ವಾಹಣಾ ತಂಡದಿಂದ ಶೋಧ ಕಾರ್ಯ ನಡೆದಿತ್ತು. ಇವತ್ತು ಚಾನಲ್ನಲ್ಲಿ ಪ್ರತೀಶ್ ಮೃತದೇಹ ಪತ್ತೆಯಾಗಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕಾರ್ಪೊರೇಟರ್ ಪುತ್ರ
ಪ್ರತೀಶ್ ತಾಯಿ ಆರತಿ ಪ್ರಕಾಶ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯೆ. ತಂದೆ ಅ.ಮ.ಪ್ರಕಾಶ್. ತಂದೆಯೊಂದಿಗೆ ಆಭರಣ ಸಿದ್ಧತಾ ಕಾರ್ಯದಲ್ಲಿ ಪ್ರತೀಶ್ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]