SHIVAMOGGA LIVE NEWS | 22 JULY 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
CRIME NEWS : ಬೆಂಗಳೂರಿನಿಂದ ಜೋಗ ಜಲಪಾತಕ್ಕೆ (FALLS) ಬಂದಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಗೆ ಉರುಳಿದೆ. ಮೂರು ಅಪರಾಧ ಸುದ್ದಿಗಳು ಫಟಾಫಟ್
ಜೋಗಕ್ಕೆ ಬಂದಿದ್ದ ಯುವಕ ನಾಪತ್ತೆ
ಶಿವಮೊಗ್ಗ ಲೈವ್.ಕಾಂ : ಜೋಗ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಯುವಕನೊಬ್ಬ ಕಾಣೆಯಾಗಿದ್ದಾನೆ. ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬೆಂಗಳೂರಿನಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿದ್ದ ಗದಗ ಮೂಲದ ಆನಂದ್ (24) ಕಣ್ಮರೆಯಾಗಿದ್ದಾನೆ. ಜು.15ರಂದು ಜೋಗ ವೀಕ್ಷಣೆಗಾಗಿ ಆಗಮಿಸಿದ್ದ. ಆತನ ಬ್ಯಾಗ್ ಪತ್ತೆಯಾಗಿದೆ. ಯುವಕನಿಗಾಗಿ ಕಾರ್ಗಲ್ ಠಾಣೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಕ್ರೆಬೈಲು ಬಳಿ ಲಾರಿ ಪಲ್ಟಿ 
ಶಿವಮೊಗ್ಗ ಲೈವ್.ಕಾಂ : ಸಕ್ರೆಬೈಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಮಂಗಳೂರಿನಿಂದ ಬಳ್ಳಾರಿಗೆ ಕಲ್ಲಿದ್ದಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಅಪಘಾತಕ್ಕೀಡಾಗಿದೆ. ಲಾರಿಯಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ರಸ್ತೆ ಬಿಟ್ಟು ಪಕ್ಕದ ಚರಂಡಿಗೆ ಲಾರಿ ಪಲ್ಟಿಯಾಗಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ರಾತ್ರಿ ಇದ್ದ ಬೈಕ್ ಬೆಳಗ್ಗೆ ನಾಪತ್ತೆ
ಶಿವಮೊಗ್ಗ ಲೈವ್.ಕಾಂ : ವಿನೋಬನಗರದ ಕೆಂಚಪ್ಪ ಬಡಾವಣೆಯ ಲಕ್ಷ್ಮಿಪುರ ಮುಖ್ಯ ರಸ್ತೆಯಲ್ಲಿ ಶ್ರೀಧರ್ ಎಂಬುವವರ ಆರ್.ಎಕ್ಸ್.135 ಬೈಕ್ ಕಳ್ಳತನವಾಗಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈ ಬೆಳಗಾಗುವುದರಲ್ಲಿ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಬಳಿಕ ಶ್ರೀಧರ್ ಅವರು ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ ⇓
ತುಂಗಾ ಡ್ಯಾಂ ಒಳ ಹರಿವು ಕುಸಿತ, ಭದ್ರಾಗೆ ತುಸು ಹೆಚ್ಚಳ, ಲಿಂಗನಮಕ್ಕಿಯಲ್ಲಿ ನೀರಿನ ಮಟ್ಟ ಎಷ್ಟಿದೆ?
LATEST NEWS
- ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್, 19 ಅಕೌಂಟ್, 25 ATM ಕಾರ್ಡ್, ₹55 ಕೋಟಿ ನಷ್ಟ, ಏನಿದು ಕೇಸ್?

- ಭದ್ರಾವತಿಯಲ್ಲಿ ಸಬ್ ಇನ್ಸ್ಪೆಕ್ಟರ್ಗಳ ಕಾಲಿನ ಮೂಳೆ, ಕೈ ಬೆರಳು ಕಟ್, ಆರೋಪಿ ಕಾಲಿಗೆ ಗುಂಡೇಟು

- ಶಿವಮೊಗ್ಗ ಜಿಲ್ಲೆಯಲ್ಲಿ ಮೈ ಸುಡುವ ಬಿಸಿಲಿನ ಜೊತೆಗೆ ಮೈ ನಡುಗಿಸುವ ಚಳಿ, ಇವತ್ತಿನ ಹವಾಮಾನ ವರದಿ

- ಶಿವಮೊಗ್ಗ ತಾಲೂಕಿನ ಹಲವೆಡೆ ಫೆಬ್ರವರಿ 8, 9 ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ನಂಜಪ್ಪ ಆಸ್ಪತ್ರೆಯಲ್ಲಿ ನಡುರಾತ್ರಿ ಚಿರತೆಗೆ ಸ್ಕ್ಯಾನಿಂಗ್, ಏನಿದು? ಹೇಗೆ ನಡೆಯಿತು ಪ್ರಕ್ರಿಯೆ?

About The Editor
ನಿತಿನ್ ಆರ್.ಕೈದೊಟ್ಲು






