SHIVAMOGGA LIVE | 21 JULY 2023
SHIMOGA : ಮೆಗ್ಗಾನ್ ಆಸ್ಪತ್ರೆಯಲ್ಲಿ ಕೈದಿಯೊಬ್ಬನಿಗೆ ಗಾಂಜಾ ಪೂರೈಕೆ ಮಾಡಿದ ಆರೋಪ ಸಂಬಂಧ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ (Taken To Custody) ಪಡೆದಿದ್ದಾರೆ. ಆತನನ್ನು ದೊಡ್ಡಪೇಟೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಂಜಾ ಸಹಿತ ಜಲೀಲ್ ಎಂಬಾತನನ್ನು ಸಶಸ್ತ್ರ ಮೀಸಲು ಪಡೆ (ಡಿಎಆರ್) ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದ್ದಾರೆ.
![]() |
ಹೇಗೆ ಸಿಕ್ಕಿಬಿದ್ದ ಗಾಂಜಾ ಪೂರೈಕೆದಾರ?
ಅನಾರೋಗ್ಯ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಕೇಂದ್ರ ಕಾರಾಗೃಹದ ಮೂವರು ಕೈದಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಡಿಎಆರ್ನ ಐವರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಜನ ಸಂದಣಿ ಹೆಚ್ಚಿದ್ದಾಗ ಕೈದಿಯ ಸಮೀಪಕ್ಕೆ ತೆರಳಿ ಜಲೀಲ್ ಗಾಂಜಾ ಪೂರೈಕೆ ಮಾಡಿದ್ದಾನೆ. ಇದನ್ನು ಗಮನಿಸಿದ ಡಿಎಆರ್ ಸಿಬ್ಬಂದಿ ಆತನ್ನು ವಶಕ್ಕೆ (Taken To Custody) ಪಡೆದು ವಿಚಾರಣೆ ನಡೆಸಿದಾಗ ವಿಷಯ ಬಾಯಿಬಿಟ್ಟಿದ್ದಾನೆ.
ಇದನ್ನೂ ಓದಿ – ಬೈಕ್ ಚಲಾಯಿಸಿ ಸಿಕ್ಕಿಬಿದ್ದ ಮಗ, ಅಪ್ಪನಿಗೆ 25 ಸಾವಿರ ದಂಡ, ಕಾರಣವೇನು?
ಜಲೀಲ್ನನ್ನು ಕೂಡಲೆ ದೊಡ್ಡಪೇಟೆ ಠಾಣೆಗೆ ಕರೆದೊಯ್ದು ಒಪ್ಪಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಿಬ್ಬಂದಿಗಳು ಸಸ್ಪೆಂಡ್ ಆಗಿದ್ದರು
ಆರೋಗ್ಯ ತಪಾಸಣೆಗೆ ಬರುವ ಕೈದಿಗಳಿಗೆ ಕದ್ದು ಮುಚ್ಚಿ ಗಾಂಜಾ ಪೂರೈಕೆ ಮಾಡುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಇಂತದ್ದೇ ಪ್ರಕರಣಗಳಿಂದಾಗಿ ಡಿಎಆರ್ನ ಹಲವು ಸಿಬ್ಬಂದಿ ಸಸ್ಪೆಂಡ್ ಆಗಿದ್ದರು.
ಇದನ್ನೂ ಓದಿ – ಶಿವಮೊಗ್ಗ ಪೊಲೀಸರಿಂದ ಚರ್ಚ್ ಫಾದರ್ ಬಂಧನ, ವಿಚಾರಣೆ
ಮೆಗ್ಗಾನ್ ಅಸ್ಪತ್ರೆಯಲ್ಲಿ ಜನ ಸಂದಣಿ ಹೆಚ್ಚು. ಕೈದಿಗಳನ್ನು ವೈದ್ಯರ ಬಳಿ, ಸ್ಕ್ಯಾನಿಂಗ್ ರೂಂಗೆ ಕರೆದುಕೊಂಡು ಹೋಗುವಾಗ ಜನ ಹೆಚ್ಚಿರುವ ಕಡೆ ಕೆಲವರು ಬೇಕೆಂದೆ ಕೈದಿಗಳ ಸಮೀಪಕ್ಕೆ ತೆರಳುತ್ತಾರೆ. ಯಾರಿಗೂ ಕಾಣದ ಹಾಗೆ ಕೈದಿಗಳ ಕೈಗೆ ಗಾಂಜಾ ಪ್ಯಾಕೆಟ್ ಇಟ್ಟು ಪರಾರಿಯಾಗುತ್ತಾರೆ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಕೈದಿಗಳನ್ನು ಕರೆತಂದಾಗ ಡಿಎಆರ್ ಸಿಬ್ಬಂದಿ ಮೈಯಲ್ಲ ಕಣ್ಣಾಗಿರುತ್ತಾರೆ. ಇವತ್ತು ಸಿಬ್ಬಂದಿ ಗಾಂಜಾ ಪೂರೈಕೆ ಮಾಡುತ್ತಿದ್ದವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200