SHIVAMOGGA LIVE NEWS | 5 MARCH 2024
SHIMOGA : ರೈಲ್ವೆ ನಿಲ್ದಾಣದ ಪಕ್ಕದ ಗೂಡ್ಸ್ ಶೆಡ್ ರಸ್ತೆಯಲ್ಲಿ ಮೂವರು ಯುವಕರನ್ನು ಅಪರಿಚಿತರು ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಯುವಕರು ರೈಲು ಬರಲು ಇನ್ನೂ ಸಮಯವಿದೆ ಎಂದು ಮಾತನಾಡುತ್ತದ್ದ ವಾಕಿಂಗ್ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಜಯನಗರ ನಿವಾಸಿ ವಿನೀತ್ (29), ದಾವಣಗೆರೆಯ ಮಾರುತಿ (28) ಮತ್ತು ರಮೇಶ್ (28) ಗಾಯಾಳುಗಳು.
ಘಟನೆ ಸಂಭವಿಸಿದ್ದು ಹೇಗೆ?
ವಿನೀತ್ ಅವರ ಸಂಬಂಧಿಯ ಮದುವೆ ಸಮಾರಂಭ ಮುಗಿಸಿ ಮಾರುತಿ ಮತ್ತು ರಮೇಶ್ ಬೆಂಗಳೂರಿಗೆ ಮರಳುತ್ತಿದ್ದರು. ರಾತ್ರಿ 10 ಗಂಟೆಗೆ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದರು. ರೈಲು ಬರಲು ಇನ್ನೂ ಸಮಯವಿದ್ದರಿಂದ ಪಕ್ಕದ ಗೂಡ್ಸ್ ಶೆಡ್ ರಸ್ತೆಯಲ್ಲಿ ಮಾತನಾಡುತ್ತ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭ ಶೇಷಾದ್ರಿಪುರಂ ಕಡೆಯಿಂದ ಬೈಕಿನಲ್ಲಿ ಬಂದ ಮೂವರು ಅಪರಿಚಿತರು ವಿನೀತ್ ಮತ್ತು ಆತನ ಸ್ನೇಹಿತರನ್ನು ಅಡ್ಡಗಟ್ಟಿ ಬೈಕ್ ನಿಲ್ಲಿಸಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಕೆಲಸದ ಒತ್ತಡಕ್ಕೆ ಬ್ರೇಕ್, ಆಟೋಟದಲ್ಲಿ ನೌಕರರು ರಿಲ್ಯಾಕ್ಸ್, ಹೇಗಿತ್ತು ಕ್ರೀಡಾಕೂಟ? ಏನೆಲ್ಲ ಸ್ಪರ್ಧೆಗಳಿದ್ದವು?
ಮೂವರಿಗೂ ಚಾಕುವಿನಿಂದ ಹಲ್ಲೆ ನಡೆಸಿ 4500 ರೂ. ನಗದು, ಮೂರು ಮೊಬೈಲ್ ಫೋನ್, ಪ್ಯಾನ್, ಆಧಾರ್ ಕಾರ್ಡ್ಗಳು ಸೇರಿದಂತೆ ಹಲವು ದಾಖಲೆಗಳನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.