ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 8 ಆಗಸ್ಟ್ 2020
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ನಿನ್ನೆಯಿಂದ ಶಿವಮೊಗ್ಗ ಭದ್ರಾ ಅಭಯಾರಣ್ಯದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ನಟ ದರ್ಶನ್ ಇವತ್ತು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ನಟ ದರ್ಶನ್ ಜೊತೆಗೆ ಇತರೆ ನಟರು ಆಗಮಿಸಿದ್ದು, ಅಭಿಮಾನಿಗಳು ಅವರಿಗೂ ಮುತ್ತಿಗೆ ಹಾಕಿ, ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ದರ್ಶನ್ ಕಾಲಿಗೆ ಬಿದ್ದು ಸೆಲ್ಫಿ
ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಐಬಿಯಿಂದ ಹೊರಬಂದ ನಟ ದರ್ಶನ್, ಫ್ಯಾನ್ಸ್ಗಳನ್ನು ಭೇಟಿಯಾದರು. ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ವೇಳೆ ಘೋಷಣೆ ಕೂಗಿದ ಅಭಿಮಾನಿಗಳು ದರ್ಶನ್ ಕೈ ಕುಲುಕಿದರು, ಹಾರ ಹಾಕಿದರು, ಕೆಲವರಂತೂ ದರ್ಶನ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ದರ್ಶನ್ ಅವರ ಟೀಮ್ಗೂ ಕಷ್ಟವಾಯಿತು.
ಚಿಕ್ಕಣ್ಣನಿಗೆ ರಾಖಿ ಕಟ್ಟಿದ ಅಭಿಮಾನಿ
ಇನ್ನು, ಐಬಿಯಿಂದ ಹೊರಬರುತ್ತಿದ್ದಂತೆ ನಟ ಚಿಕ್ಕಣ ಅವರಿಗೂ ಅಭಿಮಾನಿಗಳು ಮುತ್ತಿಗೆ ಹಾಕಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡರು, ಘೋಷನೆ ಕೂಗಿದರು. ಈ ವೇಳೆ ಯುವತಿಯೊಬ್ಬಳು ನಟ ಚಿಕ್ಕಣ್ಣ ಅವರಿಗೆ ರಾಖಿ ಕಟ್ಟಿ ಶುಭಾಶಯ ತಿಳಿಸಿದಳು.
ಅಭಯಾರಣ್ಯದಲ್ಲಿ ಸಫಾರಿ, ಫೋಟೊಗ್ರಫಿ
ನಟ ದರ್ಶನ್, ಚಿಕ್ಕಣ್ಣ ಸೇರಿದಂತೆ ಬೆಂಗಳೂರಿನಿಂದ ಆಗಮಿಸಿದ್ದ ತಂಡ, ಬೆಳಗ್ಗೆ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದರು. ಅಲ್ಲಿ ಫೋಟೋಗ್ರಫಿ ಮುಗಿಸಿ ಹಿಂತಿರುಗಿದ್ದಾರೆ. ನಟ ದರ್ಶನ್ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ.
https://www.facebook.com/liveshivamogga/videos/1480269782180553/?t=0
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]