ಶಿವಮೊಗ್ಗ ಲೈವ್.ಕಾಂ | SHIMOGA NEWS | 10 FEBRUARY 2021
ಶಿವಮೊಗ್ಗ ಡಿಸಿಐಬಿ ಪೊಲೀಸರು ಮೂರು ಕಡೆ ದಾಳಿ ನಡೆಸಿ ಮಟ್ಕಾ, ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 42 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಎಲ್ಲೆಲ್ಲಿ ದಾಳಿ ನಡೆಸಲಾಗಿದೆ?
ಸ್ಥಳ 1 : ಯಲವಟ್ಟಿ ಸರ್ಕಲ್
ಜೂಜಾಟದಲ್ಲಿ ತೊಡಗಿದ್ದ ರಾಘವೇಂದ್ರ (36) ಎಂಬಾತನ ಬಂಧನ. 15,090 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಸ್ಥಳ 2 : ಮತ್ತೋಡು ರಸ್ತೆ
ಸುರೇಶ್ (42) ಎಂಬಾತನ ಮೇಲೆ ಡಿಸಿಐಬಿ ಪೊಲೀಸರು ದಾಳಿ ನಡೆಸಿ, 17,140 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಸ್ಥಳ 3 : ಶಾಂತಿನಗರ ಚಾನೆಲ್ ಬಳಿ
ಡ್ಯಾನಿಯಲ್ ಅಲಿಯಾಸ್ ಡ್ಯಾನಿ (40) ಎಂಬಾತನ ಮೇಲೆ ದಾಳಿ. 10,620 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಡಿಸಿಐಬಿ ಇನ್ಸ್ ಪೆಕ್ಟರ್ ಕುಮಾರಸ್ವಾಮಿ, ಸಿಬ್ಬಂದಿಗಳಾದ ಹೆಚ್.ಸಿ ಹಾಲಪ್ಪ, ಸತೀಶ್ ರಾಜ್, ಮಂಜುನಾಥ್ ಹಾಗೂ ಪಿ.ಸಿ. ಚಂದ್ರಾನಾಯ್ಕ್, ಸಮೀವುಲ್ಲಾ ಮತ್ತು ವಸಂತ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]