ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA | 1 DECEMBER 2024
ಮೇಷ
ವ್ಯರ್ಥವಾಗಿ ಹಣ ಖರ್ಚು ಮಾಡಬೇಡಿ. ತಾಯಿಯ ಕಡೆಯರಿಂದ ಆರ್ಥಿಕ ಶಕ್ತಿ. ಪರಶಿವನ ಆರಾಧನೆಯಿಂದ ನೆಮ್ಮದಿ.
ವೃಷಭ
ಕೈಗಾರಿಕಾ ಕ್ಷೇತ್ರದಲ್ಲಿರುವವರಿಗೆ ಲಾಭ. ಆಧ್ಯಾತ್ಮ ಚಿಂತನೆಯಿಂದ ನೆಮ್ಮದಿ. ಉದ್ಯೋಗ ಸ್ಥಳದಲ್ಲಿ ಸನ್ಮಾನ, ಗೌರವ ಲಭಿಸಲಿದೆ.
ಮಿಥುನ
ಹೊಗಳಿಕೆ ಮಾತುಗಳಿಗೆ ಮರುಳಾಗಬೇಡಿ. ನಿರ್ವಹಣೆ ಕೊರತೆಯಿಂದ ಉದ್ಯೋಗ ಸ್ಥಳದಲ್ಲಿ ಹಿನ್ನಡೆ.
ಕರ್ಕಾಟಕ
ಒಂಟಿತನದಿಂದ ಮಾನಸಿಕ ಒತ್ತಡ. ವಿಷಜಂತುಗಳಿಂದ ಜೀವಕ್ಕೆ ಕುತ್ತು ಬರುವ ಸಾಧ್ಯತೆ.
ಸಿಂಹ
ಮದುವೆ ವಿಷಯದಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗದೆ ಗೊಂದಲ. ಪರಿಶ್ರಮ ಪಟ್ಟರೆ ಉದ್ಯೋಗ ಲಭಿಸಲಿದೆ. ದೇವರ ಪ್ರಾರ್ಥನೆಯಿಂದ ಕೆಲಸ ಕೈಗೂಡಲಿದೆ.
ಕನ್ಯಾ
ಖರ್ಚು ವೆಚ್ಚ ನಿಭಾಯಿಸಿದರೆ ಭವಿಷ್ಯ ಸುಗಮವಾಗಲಿದೆ. ಕಠಿಣ ಪರಿಶ್ರಮದಿಂದ ಮೇಲಧಿಕಾರಿಗಳ ಮನ ಗೆಲ್ಲುತ್ತೀರಿ.
ತುಲಾ
ಭೂ ವ್ಯವಹಾರದಿಂದ ಲಾಭ ದೊರೆಯಲಿದೆ. ವಿದ್ಯುತ್ ಗುತ್ತಿಗೆದಾರರಿಗೆ ಉತ್ತಮ ಅವಕಾಶ ದೊರೆಯಲಿದೆ.
ವೃಶ್ಚಿಕ
ಮನೆಯಲ್ಲಿ ಮಧುರ ಕ್ಷಣ. ಸ್ನೇಹಿತರೊಂದಿಗಿನ ಚರ್ಚೆಯಿಂದ ದೊಡ್ಡ ಸಮಸ್ಯೆಗೆ ಪರಿಹಾರ. ಆಭರಣ ಖರೀದಿ ಯೋಗ.
ಧನು
ಕೆಲಸಗಳಿಗೆ ಅನಿರೀಕ್ಷಿತ ತೊಡಕು. ಶಾಂತಾವಾಗಿದ್ದರೆ ಸಮಸ್ಯೆಗಳು ಪರಿಹಾರವಾಗಲಿದೆ. ಸಣ್ಣಪುಟ್ಟ ವಿಷಯಕ್ಕೂ ಆಳವಾದ ಯೋಚನೆ ಮಾಡುವುದು ಬೇಡ.
ಮಕರ
ಹಿರಿಯ ಅಧಿಕಾರಿಗಳಿಂದ ನಿಂದನೆ ಸಾಧ್ಯತೆ. ಔಷಧಿಗಳ ಬಳಕೆ ಬಗ್ಗೆ ನಿಗಾ ಇರಲಿ. ಕಾಲು ನೋವಿನಿಂದ ನೆಮ್ಮದಿಗೆ ಭಂಗ.
ಕುಂಭ
ಹೂಡಿಕೆಯಿಂದ ಅಧಿಕ ಲಾಭ. ಪರಿಶ್ರಮಕ್ಕೆ ತಕ್ಕ ಆದಾಯ. ಅಪರಿಚಿತ ವ್ಯಕ್ತಿಗಳಿಂದ ಸಂತೋಷ.
ಮೀನ
ರಫ್ತು ವ್ಯಾಪಾರದಲ್ಲಿ ಲಾಭ. ನಿಮ್ಮ ಕಚೇರಿಯಲ್ಲಿ ಕೆಲಸಕ್ಕೆ ಉದ್ಯೋಗಿಗಳು ಸಿಗದ ಸಂಕಷ್ಟ.
ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಗೆ ಮಿನಿಸ್ಟರ್ ದಿಢೀರ್ ಭೇಟಿ, ಅಧಿಕಾರಿ ಸಸ್ಪೆಂಡ್
Dina Bhavishya
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422