DINA BHAVISHYA, 1 SEPTEMBER 2024
ಮೇಷ : ವಿದ್ಯಾರ್ಥಿಗಳಿಗೆ ಒಳ್ಳೆಯ ಯೋಗ. ಬಂಧುಗಳಿಂದ ತೊಂದರೆ. ಆಸ್ತಿ ಖರೀದಿಸುವುದಕ್ಕೆ ಉತ್ತಮ ದಿನವಲ್ಲ. ಆರೋಗ್ಯ ನೋಡಿಕೊಳ್ಳಿ. ಮನಸ್ಸಿಗೆ ಬಂದಂತೆ ಖರ್ಚು.
ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಕುಟುಂಬದ ಸಹಕಾರ ಬುದ್ದಿ ಶಕ್ತಿಗೆ ತಕ್ಕ ಲಾಭವಿಲ್ಲ. ಐದರ ಕೇತು ಬಾಧಿಸುತ್ತಾನೆ. ಶರೀರಾರೋಗ್ಯ ಕಡಿಮೆ. ಗಣೇಶನಿಗೆ ಅಭಿಷೇಕ ಸೇವೆ ಮಾಡಿಸಿ.
ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಈ ದಿನ ನಾಗನ ಆರಾಧನೆ ಉತ್ತಮ. ಮನಸ್ಸಿಗೆ ನೋವು. ಮಾತಿನ ಗಾಯ. ಅನಿರೀಕ್ಷಿತ ಬಂದ ಬಂಧುಗಳಿಂದ ತೊಂದರೆ. ನವಮದ ಶನಿ ಸ್ವಲ್ಪ ಒಳಿತು ಮಾಡುತ್ತಾನೆ.
ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಅಪ್ಪ ಮಗನ ಗ್ರಹಗಳ ಸಂಯೋಗದಿಂದ ತೊಂದರೆ. ಹಣ ಲಾಭ. ಶನಿ ಸ್ವಲ್ಪ ಬಾಧಿಸುತ್ತಾನೆ. ನವಮದ ರಾಹು ಬುದ್ಧಿಗೆ ಬೇಸರ. ಜೇನುತುಪ್ಪ ಅಭಿಷೇಕ ಆಂಜನೇಯನಿಗೆ ಮಾಡಿಸಿ..
ಶುಭ ಸಂಖ್ಯೆ : 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ಈದಿನ ಚೆನ್ನಾಗಿದೆ. ಯೋಗವಿದೆ. ಆದರೆ ಸ್ವಲ್ಪ ಕಡಿಮೆ ಇದೆ. ರಾಹು ಬಾಹುಬಲದ ಆಯಾಸ ಕೊಡುತ್ತಾನೆ. ಬಯಸದೇ ಬಂದ ಖರ್ಚು. ಗೋತ್ತಾಗದ ಲಾಭ. ಒಟ್ಟಾರೆ ಮಿಶ್ರ ಫಲ. ವಿಷ್ಣು ಸಹಸ್ರನಾಮ ಓದಿ.
ಶುಭ ಸಂಖ್ಯೆ : 5-6-9-11, ಬಣ್ಣ : ಕೆಂಪು-ಬಿಳಿ
ಕನ್ಯಾ : ಕುಲದ ದೇವರನ್ನು ನೆನೆಯಿರಿ. ಅಪಘಾತ ಉಂಟಾಗಬಹುದು. ಮನಸ್ಸಿಗೆ ಗಾಯ. ಆರೋಗ್ಯ ಸಮಸ್ಯೆ. ಇಷ್ಟು ದುಃಖ ಇದ್ದರೂ ಖರ್ಚು ಕಡಿಮೆ. ಹುರಲಿಕಾಳು ದಾನ ಮಾಡಿ.
ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು
ತುಲಾ : ಹೊಂದಾಣಿಕೆ ಈದಿನ ಮುಖ್ಯವಾಗಿ ಆಗಬೇಕು. ಪಂಚಮದ ಶನಿ ಸುಖ ನೀಡುತ್ತಾನೆ. ಉದ್ಯೋಗದಲ್ಲಿ ಸಮ. ಲಾಭ ಜಾಸ್ತಿ. ನಾಗದೇವರಿಗೆ ಹಾಲಿನ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ನಿಮ್ಮ ಆಲಸ್ಯ ನಿಮಗೆ ಸಮಸ್ಯೆ. ನಿಮ್ಮ ಮಾತಿನ ಮೇಲೆ ನಿಮಗೆ ಬೆಲೆ ಇಲ್ಲ. ಹಿಂದೆ ಬೀಳುತ್ತೀರಿ. ರಾಹುವಿನ ಅವಕೃಪೆ ಬಿದ್ದಿದೆ. ಅನ್ನದಾನ ಮಾಡಿ.
ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಬಂಧುಗಳ ಸಹಕಾರವಿಲ್ಲ. ಕುಟುಂಬದ ಸಹಕಾರದಿಂದ ಉನ್ನತ ಜೀವನ. ಆರೋಗ್ಯವೇ ಭಾಗ್ಯ. ಮನಸ್ಸಿನಂತೆ ಮಾತಾಡಬೇಡಿ. ಶನಿದೇವರ ಪೂಜೆ ಮಾಡಿಸಿ.
ಶುಭ ಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ
ಮಕರ : ಅಣ್ಣ ತಮ್ಮಂದಿರ ಮಧ್ಯೆ ಗಲಾಟೆ. ಧನಾಗಮನ. ಸಪ್ತಮದ ಬುಧನ ಬಾಧೆ. ಪತಿಗೆ ಸತಿ ಕಾಡುತ್ತಾಳೆ. ಈಶ್ವರನಿಗೆ ದೀಪದ ಎಣ್ಣೆ ದಾನ ಮಾಡಿ.
ಶುಭ ಸಂಖ್ಯೆ : 10-11-02, ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ರಾಶಿಯ ಅಧಿಪತಿ ಇದ್ದರೂ ನಿಮಗೆ ಉತ್ತಮವಲ್ಲದಿದ್ದರೂ. ನಷ್ಟವೇನು ಇಲ್ಲ. ಖರ್ಚು ಕಡಿಮೆ ಮಾಡಿಕೊಳ್ಳಿ. ಶೀತ ಕೆಮ್ಮ ಬಾಧಿಸುತ್ತದೆ. ಹರಿದ್ರಾ ಅಭಿಷೇಕ ಮಾಡಿಸಿ ನಾಗನಿಗೆ.
ಶುಭ ಸಂಖ್ಯೆ : 11-03-06, ಬಣ್ಣ : ನೀಲಿ-ಬೂದು
ಮೀನ : ಕೋಪ ನಿಮ್ಮನ್ನು ಸುಡಲಿದೆ. ದುಃಖ ಬೇಸರ ಜಾಸ್ತಿ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ. ಗಣೇಶನಿಗೆ ಪಂಚಾಮೃತ ಪೂಜೆ ಸಲ್ಲಿಸಿ.
ಶುಭ ಸಂಖ್ಯೆ : 12-1-8-5, ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲೆ ಬಂದ್‌ನ ಎಚ್ಚರಿಕೆ ನೀಡಿದ ವೀರಶೈವ ಲಿಂಗಾಯತ ಮಹಾಸಭಾ, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200