ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಮೇಷ : ಸೂಕ್ತ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡಬೇಕು. ಸಂಪೂರ್ಣ ತಿಳಿವಳಿಕೆ ಗಳಿಸದೆ ವ್ಯಾಪಾರ, ವಹಿವಾಟಿನಲ್ಲಿ ಹೂಡಿಕೆ ಮಾಡುವುದು ಬೇಡ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ವೃಷಭ : ಒತ್ತಡ ನಿವಾರಣೆಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಹಾಸ್ಯದ ಮಾತಿನಿಂದ ಸುತ್ತಲು ಇದ್ದವರಲ್ಲಿ ಉಲ್ಲಾಸ ಮೂಡಿಸಿ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮಿಥುನ : ವಾದಗಳಿಂದ ಸಾಧಿಸುವುದಕ್ಕಿಂತಲು ಕಳೆದುಕೊಳ್ಳುವುದು ಹೆಚ್ಚು. ವಾದಕ್ಕಿಳಿಯುವ ಮುನ್ನ ಮರು ಯೋಚಸುವುದು ಸೂಕ್ತ. ಪ್ರೀತಿಪಾತ್ರರೊಂದಿಗಿನ ಮಾತಿನಿಂದ ಸಂತೋಷ.
ಕರ್ಕಾಟಕ : ಕಷ್ಟಕಾಲಕ್ಕೆ ಅನುಕೂಲವಾಗುವಂತೆ ಹಣ ಸಂಗ್ರಹಿಸಿಡುವುದು ಸೂಕ್ತ. ಮುಂದೆ ಉಪಯೋಗ ಆಗಲಿದೆ. ಸೃಜನಶೀಲ ವ್ಯಕ್ತಿತ್ವದಿಂದ ಅನಿರೀಕ್ಷಿತ ಫಲ ಸಿಗಲಿದೆ.
ಸಿಂಹ : ಅನುಭವ ಮತ್ತು ಜ್ಞಾನ ಹಂಚಿಕೊಂಡರೆ ಮನ್ನಣೆ ಸಿಗುವುದು ನಿಶ್ಚಿತ. ಒತ್ತಡ ನಿವಾರಣೆಗೆ ಆಸಕ್ತಿಕರ ವಿಚಾರ ಓದುವುದು ಸೂಕ್ತ.
ಕನ್ಯಾ : ನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕರ. ಮನಸನ್ನು ಮುದವಾಗಿ ಇಡಲಿದೆ. ನಿತ್ಯ ವ್ಯಾಯಾಮದ ಕಡೆ ಯೋಚನೆ ಸೂಕ್ತ. ದುಡುಕಿನ ನಿರ್ಧಾರಿಂದ ಸಮಸ್ಯೆ ಉಂಟಾಗಲಿದೆ.
ತುಲಾ : ಕುಟುಂಬ ಸದಸ್ಯರ ಜೊತೆ ಸೌಹಾರ್ದ ವಾತಾವರಣ ಸೃಷ್ಟಿಸಿಕೊಳ್ಳಬೇಕಿದೆ. ಅನಗತ್ಯ ಅಲೋಚನೆಗಳಿಂದ ನೆಮ್ಮದಿ ಭಂಗ.
ವೃಶ್ಚಿಕ : ಧ್ಯಾನದಿಂದ ನೆಮ್ಮದಿ ಮತ್ತು ಮಾನಸಿಕ ಶಕ್ತಿ ವೃದ್ಧಿಯಾಗಲಿದೆ. ಹಣಕಾಸು ದುರ್ಬಲ. ಹೆಚ್ಚು ಚಿಂತೆ ಮಾಡಬೇಕಾಗುತ್ತದೆ.
ಧನು : ಹಣ ಉಳಿಸುವ ಪ್ರಯತ್ನ ವಿಫಲ. ಸಣ್ಣಪುಟ್ಟದ್ದಕ್ಕು ದೊಡ್ಡ ಮಟ್ಟದ ಖರ್ಚು. ಮಾನಸಿಕ ನೆಮ್ಮದಿ ಇರುವುದಿಲ್ಲ. ಮಕ್ಕಳಿಗೆ ಅನಾರೋಗ್ಯ.
ಮಕರ : ಕೆಲಸದ ಸ್ಥಳದಲ್ಲಿ ಮಹತ್ವದ ಬದಲಾವಣೆಯಿಂದ ಅನುಕೂಲ. ಹಣ ಹೂಡಿಕೆಯತ್ತ ಆಸಕ್ತಿ ಹೆಚ್ಚಳ.
ಕುಂಭ : ಓದು ಮತ್ತು ಸಂಗೀತದಿಂದ ಮನಸಿಗೆ ಮುದ. ಚೈತನ್ಯ ಹೆಚ್ಚಲಿದೆ. ಉದ್ಯೋಗ ಮತ್ತು ಕುಟುಂಬದಲ್ಲಿ ಉಲ್ಲಾಸ.
ಮೀನ : ಸಹೋದ್ಯೋಗಿಗಳ ಜೊತೆಗೆ ಬಾಂಧವ್ಯ ಉತ್ತಮವಾಗಿದ್ದರೆ ಕೆಲಸ ಸುಲಭ. ಆತುರದ ನಿರ್ಧಾರ, ಹೆಚ್ಚಿನ ನಂಬಿಕೆಗಳು ಭವಿಷ್ಯದಲ್ಲಿ ಕೆಡುಕು ಉಂಟು ಮಾಡಲಿವೆ.
ಇದನ್ನೂ ಓದಿ – ಭತ್ತ, ಹೆಚ್ಚು ನೀರು ಬೇಡುವ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ, ಕಾರಣವೇನು?