ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 12 NOVEMBER 2024
ಮೇಷ : ಇಡೀ ದಿನ ಆಹ್ಲಾದಕರವಾಗಿರುತ್ತದೆ. ಸ್ನೇಹಿತರೊಂದಿಗೆ ಸುತ್ತಾಡಲು ತೆರಳುವಿರಿ. ಹಣ ಹೆಚ್ಚಾಗಿ ಖರ್ಚಾಗುತ್ತದೆ. ಈ ಕುರಿತು ನಿಗಾ ಇರಲಿ. ನಿಮ್ಮ ಆಲೋಚನೆಗಳನ್ನು ಚನ್ನಾಗಿ ಪ್ರಸ್ತುತಪಡಿಸುತ್ತೀರಿ. ಇದರಿಂದ ಕೆಲಸದ ಸ್ಥಳದಲ್ಲಿ ನಿಮಗೆ ಲಾಭವಾಗಲಿದೆ.
ವೃಷಭ : ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕಿದೆ. ಇವತ್ತು ಸ್ವಲ್ಪ ಒತ್ತಡ ಮುಕ್ತವಾಗಿರುತ್ತದೆ. ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ವ್ಯವಹಾರದ ಪಾಲುದಾರರ ವಿರುದ್ಧ ಬೇಸರ ಮಾಡಿಕೊಳ್ಳಬೇಡಿ.
ಮಿಥುನ : ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಮುಖ್ಯಸ್ಥರ ಕೋಪಕ್ಕೆ ತುತ್ತಾಗುತ್ತೀರಿ. ಮನೆಯಲ್ಲಿ ಸಂಗಾತಿಯೊಂದಿಗೆ ಮುನಿಸು.
ಕರ್ಕಾಟಕ : ಅನಿರೀಕ್ಷಿತವಾಗಿ ಒಳ್ಳೆಯ ಸುದ್ದಿ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲ್ವಿಚಾರಕರು ನಿಮ್ಮೊಂದಿಗೆ ಉತ್ತಮವಾಗಿ ನಡೆದುಕೊಳ್ಳಲಿದ್ದಾರೆ. ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಸಂಗಾತಿಯೊಂದಿಗೆ ಸಂತೋಷವಿರಲಿದೆ.
ಸಿಂಹ : ಹಣದ ಚಿಂತೆ ಮೂಡಲಿದೆ. ಸ್ನೇಹಿತರಿಂದ ಸಾಲ ಕೇಳಬೇಕಾದ ಪರಿಸ್ಥಿತಿ. ಯಾವುದೆ ಕೆಲಸಕ್ಕೆ ಇವತ್ತು ನಿಗದಿಗಿಂತಲೂ ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ. ಯಶಸ್ಸು ಸಿಗಲಿದೆ.
ಕನ್ಯಾ : ಆಹಾರ ಸೇವನೆಯ ಮೇಲೆ ನಿಗಾ ಇರಲಿ. ಇವತ್ತು ಹಣದ ಅಪವ್ಯಯ ಸಾಧ್ಯತೆ. ಮನೆ ಕೆಲಸದಿಂದ ಹೈರಾಣಾಗುವಿರಿ. ಮಾನಸಿಕ ಒತ್ತಡ ಇರಲಿದೆ.
ತುಲಾ : ಅನಗತ್ಯ ಒತ್ತಡದಿಂದ ದೂರವಿರಲು ಪ್ರಯತ್ನಿಸಿ. ಭೂಮಿ ಖರೀದಿ ಮತ್ತು ಮಾರಾಟಕ್ಕೆ ಉತ್ತಮ ದಿನ. ಮಕ್ಕಳ ಪ್ರೀತಿ ಸಂಪಾದಿಸಿ. ಹೊಸ ಕೆಲಸ ಹುಡುಕಲು ಇದು ಸಕಾಲ.
ವೃಶ್ಚಿಕ : ಇವತ್ತು ಮನೆಗೆ ಸಂಬಂಧಿಸಿದಂತೆ ಹೂಡಿಕೆ ಮಾಡಲು ಅತ್ಯುತ್ತಮ ದಿನ. ನಿಮ್ಮ ವ್ಯಕ್ತಿತ್ವ ಹಲವರನ್ನು ಆಕರ್ಷಿಸಲಿದೆ. ನಿಮ್ಮ ಸೃಜನಶೀಲತೆ ಕಾರಣಕ್ಕೆ ಕೆಲಸದ ಸ್ಥಳದಲ್ಲಿ ಎಲ್ಲರು ನಿಮ್ಮತ್ತ ಗಮನ ಕೇಂದ್ರೀಕರಿಸಲಿದ್ದಾರೆ.
ಧನುಸ್ಸು : ಆರ್ಥಿಕ ಲಾಭವಿದೆ. ಸ್ನೇಹಿತರು ಮತ್ತು ಅಪರಿಚಿತರ ಕುರಿತು ಎಚ್ಚರವಿರಲಿ. ಕೈಗೊಂಡ ಕಾರ್ಯಗಳು ನಿರೀಕ್ಷೆಯಂತೆ ನಿಮ್ಮ ಗುರಿ ತಲುಪುವುದಿಲ್ಲ. ಸಂಗಾತಿಯಿಂದ ನೆರವು
ಮಕರ : ಆಪ್ತರೊಂದಿಗೆ ಜಗಳ ಸಾಧ್ಯತೆ. ಆರಕ್ಷಕರವರೆಗೆ ವಿಷಯ ತಲುಪಲಿದೆ. ಅಮೂಲ್ಯ ಸಮಯ ವ್ಯರ್ಥವಾಗಲಿದೆ. ವೃತ್ತಿಯಲ್ಲಿ ತೊಡಿಗಿಸಿಕೊಳ್ಳುವುದಕ್ಕಿಂತಲು ಹೊರಗೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ.
ಕುಂಭ : ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಉತ್ತಮವಾದ ದಿನ. ಸಂಬಂಧಿಕರು ಸಾಲ ಕೇಳಿ ಬರುತ್ತಾರೆ. ಕೊಡುವಾಗ ಎಚ್ಚರ ವಹಿಸಿ. ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ.
ಮೀನ : ಪ್ರೀತಿ, ಪ್ರೇಮದ ವಿಚಾರದಲ್ಲಿ ಬಹಳಷ್ಟು ತೊಂದರೆ ಉಂಟಾಗಲಿದೆ. ನೀವು ಬಯಸುವ ಹೊಗಳಿಕೆಯ ಮಾತುಗಳನ್ನು ಇಂದು ಕೇಳುವಂತಾಗಲಿದೆ. ಸಂಗಾತಿಯೊಂದಿಗೆ ಸ್ವಲ್ಪ ಕಸಿವಿಸಿಯಾಗಲಿದೆ.
ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿಯಲ್ಲಿ ಉದ್ಯೋಗವಕಾಶವಿದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422