ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 14 NOVEMBER 2024
ಮೇಷ : ಇಂದು ಯಾವುದೆ ನಿರ್ಧಾರ ಕೈಗೊಳ್ಳುವಾಗ ಗಡಿಬಿಡಿ ಮಾಡಬೇಡಿ. ವೈಯಕ್ತಿಕ ಮತ್ತು ಗೌಪ್ಯ ವಿಚಾರಗಳನ್ನು ಯಾರ ಮುಂದೆಯೂ ಬಹಿರಂಗಪಡಿಸಬೇಡಿ. ಹೆಂಡತಿಯೊಂದಿಗೆ ವಿರಸ.
ವೃಷಭ : ತುಂಬಾ ದಣಿದಿದ್ದೀರ. ವಿಶ್ರಾಂತಿ ಪಡೆಯಿರಿ. ಅನ್ಯರ ದೋಷ ಕಂಡು ಹಿಡಿಯಲು ಹೋಗಬೇಡಿ. ವಾದ, ಜಗಳಕ್ಕೆ ಮುಂದಾಗಬೇಡಿ. ನಿರೀಕ್ಷೆಯಂತೆ ಕೆಲಸಗಳು ಆಗದಿರುವುದರಿಂದ ಅಸಮಾಧಾನ.
ಮಿಥುನ : ಕೆಲಸದ ಸ್ಥಳ ಮತ್ತು ಮನೆಯಲ್ಲಿ ನಿಮ್ಮ ಸಹನೆ ಪರೀಕ್ಷೆ ಮಾಡುವ ಪರಿಸ್ಥಿತಿ ಎದುರಾಗಲಿದೆ. ಆರೋಗ್ಯ ಏರುಪೇರು. ಮದ್ಯ ಸೇವನೆ ತ್ಯಜಿಸಲು ಇದ ಸಾಕಾಲ.
ಕರ್ಕಾಟಕ : ಆಹಾರದ ಮೇಲೆ ನಿಗಾ ಇರಲಿ. ಪ್ರೀತಿ ಪಾತ್ರರಿಂದ ಉಡುಗೊರೆ ಲಭಿಸಲಿದೆ. ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ದುರಭ್ಯಾಸಗಳಿಂದ ದೂರವಿರಿ.
ಸಿಂಹ : ಭವಿಷ್ಯದ ಹೆಜ್ಜೆಯ ಕುರಿತು ಗೌಪ್ಯತೆ ಕಾಪಾಡಿ. ಆಪ್ತರಿಂದಲೆ ಅಪಾಯ ಸಾಧ್ಯತೆ. ಕುಟುಂಬದಲ್ಲಿ ವಿರಸ ಮೂಡಿಸಲು ಸುತ್ತಲು ಇರುವವರಿಂದಲೆ ಪ್ರಯತ್ನ.
ಕನ್ಯಾ : ಉದ್ಯಮಿಗಳಿಗೆ ಒಳ್ಳೆಯ ದಿನ. ವ್ಯಾಪಾರದ ಉದ್ದೇಶಕ್ಕೆ ಕೈಗೊಂಡ ಪ್ರವಾಸದಿಂದ ಲಾಭವಾಗಲಿದೆ. ಯೋಗ, ಧ್ಯಾನದಿಂದ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತೀರಿ.
ತುಲಾ : ನಿಮ್ಮಿಂದ ಸಾಲ ಪಡೆದವರು ದಿಢೀರನೆ ಹಣವನ್ನು ಹಿಂತಿರುಗಿಸುತ್ತಾರೆ. ಮುಂಗೋಪದಿಂದ ನಿಮಗೆ ಸಮಸ್ಯೆಯಾಗಲಿದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.
ವೃಶ್ಚಿಕ : ಬಿಡುವಿರದ ಕೆಲಸದಿಂದ ದಣಿಯುತ್ತೀರಿ. ಸ್ವಲ್ಪ ವಿಶ್ರಾಂತಿ ಪಡೆಯುವುದು ಸೂಕ್ತ. ಉದ್ಯಮಿಗಳಿಗೆ ಅನುಭವಿಗಳಿಂದ ವ್ಯವಹಾರದ ಕುರಿತು ಸೂಕ್ತ ಮಾಹಿತಿ ಲಭಿಸಲಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ಲಭಿಸಲಿದೆ.
ಧನು : ಕುಟುಂಬದೊಂದಿಗೆ ಸಮಯ ಕಳೆಯುವುದು ಉಚಿತ. ಒತ್ತಡ ನಿವಾರಣೆಯಾಗಲಿದೆ. ಸಂಗಾತಿಯೊಂದಿಗೆ ಮಾತುಕತೆ ನಡೆಸುವುದರಿಂದ ಸಮಾಧಾನ ಲಭಿಸಲಿದೆ.
ಮಕರ : ನಿಮ್ಮ ವಾಹನ ಕಳ್ಳತನವಾಗಬಹುದು. ಅತ್ಯಗತ್ಯ ಕೆಲಸಗಳನ್ನು ಇವತ್ತು ತಪ್ಪದೆ ಮಾಡುತ್ತೀರಿ. ಮನೆಯವರೊಂದಿಗೆ ಖುಷಿಯಿಂದ ಸಮಯ ಕಳೆಯುತ್ತೀರಿ.
ಕುಂಭ : ಹಣವನ್ನು ಹೂಡಿಕೆ ಮಾಡಿ ಅಥವಾ ಸುರಕ್ಷಿತ ಸ್ಥಳದಲ್ಲಿರಿಸಿ. ಭವಿಷ್ಯದಲ್ಲಿ ಅನುಕೂಲವಾಗಲಿದೆ. ಹಠಾತ್ ಕೆಲಸದಿಂದಾಗಿ ಸಂಜೆ ವೇಳೆ ಕುಟುಂಬವನ್ನು ನಿರ್ಲಕ್ಷಿಸುತ್ತೀರಿ. ಇದರಿಂದ ಸಮಸ್ಯೆಗೆ ಸಿಲುಕುತ್ತೀರಿ.
ಮೀನ : ಮನೆಗೆ ಸಂಬಂಧಿಸಿದ ಹೂಡಿಕೆಯಿಂದ ಲಾಭ. ಏಕಾಗ್ರತೆ ಸಾಧಿಸಿ. ಪಟ್ಟು ಬಿಡದೆ ಕೆಲಸ ಮುಂದುವರೆಸಿ. ಒಂಟಿಯಾಗಿ ಸಮಯ ಕಳೆಯಬೇಕು ಎಂದನಿಸಲಿದೆ.
ಇದನ್ನೂ ಓದಿ » ಸಿಗಂದೂರು ಬಳಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422