ದಿನ ಭವಿಷ್ಯ : ಹನ್ನೆರಡು ರಾಶಿಗಳಿಗೆ ಈ ದಿನ ಹೇಗಿದೆ? ಇಲ್ಲಿದೆ ದಿನ ಭವಿಷ್ಯ (bhavishya).
ಮೇಷ : ಅಂದುಕೊಂಡ ಕಾರ್ಯ ಸಾಧನೆ. ಆಸ್ತಿ ವಿಚಾರದಲ್ಲಿ ಉತ್ತಮ ಬೆಳವಣಿಗೆ. ಸಹೋದರರ ಪ್ರೀತಿ ಮೊದಲಾದ ಉತ್ತಮ ಫಲ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಮನೋ ಸ್ಥೈರ್ಯ ಹೆಚ್ಚಿದೆ. ಹಣಕಾಸು ಚೆನ್ನಾಗಿದೆ. ಕೆಲಸದಲ್ಲಿ ಉತ್ಸಾಹ ತೋರಿ. ಮಕ್ಕಳಿಂದ ಬೇಸರ. ಈದಿನ ಮಿಶ್ರ ಫಲ ಹೆಚ್ಚು.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಮಾತು ಕಡಿಮೆ ಮಾಡಿ. ಬಂಧುಗಳ ವಿರೋಧ. ಕುಟುಂಬಿಣಿಯ ಸಮಾಧಾನ. ಗಣೇಶನ ಪೂಜೆ ಮಾಡಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಆರೋಗ್ಯದ ಕಡೆ ಗಮನ ಕೊಡಿ. ಹಣ ಅಪವ್ಯಯ. ವಿದ್ಯಾಭ್ಯಾಸ ಉತ್ತಮ. ಈದಿನ ಉತ್ತಮ ಇದೆ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ಮನಸ್ಸಿಗೆ ಕ್ಲೇಶ. ಆತ್ಮ ವಿಶ್ವಾಸ ಕಡಿಮೆ. ಒಟ್ಟಾರೆ ಕಿರಿಕಿರಿ ಈದಿನ. ಶನಿ ಸ್ತೋತ್ರ ಓದಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
ಕನ್ಯಾ : ಸಿಟ್ಟು – ಕೋಪ ಕಾಡತೊಡಗಿದೆ. ಬೇರೆಯವರಿಂದ ತೊಂದರೆ. ಮಾತು ಮೃತ್ಯುವೂ ಆದೀತು ಹುಷಾರು. ನಾಗನಿಗೆ ನಮಸ್ಕರಿಸಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
ತುಲಾ : ಅಷ್ಟಮದ ಪ್ರಭಾವ. ಬರೀ ಚಿಂತೆ. ಆದರೂ ಭಗವಂತನ ಅನುಗ್ರಹವಿದೆ. ಅಂದು ಕಾರ್ಯ ನಿಧಾನವಾದರೂ ಮುಗಿಯುತ್ತದೆ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ಬಂಧುಗಳ ವಿರಸ. ನೆಮ್ಮದಿ ಹಾಳು. ವಿದ್ಯಾಭ್ಯಾಸವೂ ಕಡಿಮೆ. ಬರೀ ಬೇಸರ. ಈದಿನ ಚೆನ್ನಾಗಿಲ್ಲ. ಗುರು ಸ್ತ್ರೋತ್ರ ಓದಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಕುಟುಂಬ ವಿಚಾರದಲ್ಲಿ ನಮ್ಮ ಮಾತು ನಡೆಯೋಲ್ಲ. ಸಂಬಂಧ ತಟಸ್ಥ. ಕೆಲಸದಲ್ಲಿ ಹಿನ್ನಡೆ. ನಾಗನ ಪೂಜೆ ಮಾಡಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
ಮಕರ : ಶನಿ ಸಹಾಯ ಮಾಡನು. ರವಿ ಕಾಡುತ್ತಾನೆ. ಹೆದರಿಕೆ. ಅನಾರೋಗ್ಯ. ವಿದ್ಯಾಭ್ಯಾಸ ಸ್ಥಿರ. ಈಶ್ವರನ ನೆನಯಿರಿ..
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ಶನಿ ಪ್ರಭಾವ ಹೆಚ್ಚಿದೆ. ಹಣದ ಅಡಚಣೆ. ಕೋರ್ಟ್ ವ್ಯವಹಾರದ ಪ್ರಗತಿ. ಮೊದಲಾದ ಮಿಶ್ರ ಫಲ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
ಮೀನ : ನಿಮ್ಮನ್ನು ಕಾಡುವ ಕೋಪದಿಂದ ಕೆಲಸ ಹಾಳು. ಅಣ್ಣ-ತಮ್ಮಂದಿರ ಸಹಾಯ. ಮನೆಯಲ್ಲಿ ಶುದ್ಧ ವಾತಾವರಣ ಇಲ್ಲ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಂತ ಸೇವಾಲಾಲ್ ಜಯಂತಿ, ಯಾರೆಲ್ಲ ಏನೆಲ್ಲ ಮಾತನಾಡಿದರು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200