» ಮೇಷ : ನಿಮ್ಮ ಆರೋಗ್ಯ ಹದಗೆಡುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಹ ಹದಗೆಡುತ್ತದೆ. ಮಕ್ಕಳು ಅವರೆಡೆಗೆ ಗಮನ ಹರಿಸಬೇಕೆಂಬ ಬೇಡಿಕೆಯಿಟ್ಟರೂ ಆಗುವುದಿಲ. ಇಂದು ನಿಮ್ಮ ಭಾವನೆಗಳಿಗೆ ಪ್ರತಿಕ್ರಿಯೆ ದೊರಕುತ್ತದೆ. ನೀವು ಕೆಲಸದಲ್ಲಿ ತುಂಬಾ ಒತ್ತಡ ಹೇರಿದಲ್ಲಿ ಕೋಪ ಹೆಚ್ಚಾಗುತ್ತದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಇತರರ ಅವಶ್ಯಕತೆಗಳನ್ನು ತಿಳಿಯಲು ಪ್ರಯತ್ನಿಸಿ. (Bhavishya)
ಪರಿಹಾರ : ಒಂದು ಕಪ್ಪು ಬಟ್ಟೆಯಲ್ಲಿ ಕರಿಮೆಣಸು, ಸಂಪೂರ್ಣ ಕಪ್ಪು ಉದ್ದಿನ ಬೇಳೆಯನ್ನು ಕಟ್ಟಿ ಹರಿಯುವ ನೀರಿನಲ್ಲಿ ಹಾಕಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ.
ಶುಭ ಸಂಖ್ಯೆ :- 1-5-8-9 ಬಣ್ಣ :- ಕೆಂಪು-ಬಿಳಿ-ಹಳದಿ
» ವೃಷಭ : ಸೃಜನಶೀಲ ಕೆಲಸ ನಿಮ್ಮನ್ನು ಶಾಂತವಾಗಿರಿಸುತ್ತವೆ. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು. ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ.
ಪರಿಹಾರ : ಅವಶ್ಯ ವಸ್ತುಗಳನ್ನು ಬಡ ಮಕ್ಕಳಗೆ ವಿತರಿಸುವುದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಬಡ್ತಿಯಾಗುತ್ತದೆ.
ಶುಭ ಸಂಖ್ಯೆ :- 2-7-10-11 ಬಣ್ಣ :- ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಅತಿಯಾದ ಒತ್ತಡವನ್ನು ಅನುಭವಿಸುತ್ತಿದ್ದೀರ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ. ಹಣ ಅಧಿಕ ವ್ಯಯ. ವ್ಯಯದ ಗುರು ನಿಮ್ಮ ಸಮಸ್ಯೆಗಳನ್ನು ಮಾಯವಾಗಿಸಬಲ್ಲದು.
ಪರಿಹಾರ : ಅಗತ್ಯವಿರುವವರಿಗೆ ಬೇಯಿಸಿದ ಆಹಾರವನ್ನು ದಾನ ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ಸುಧಾರಿಸಬಹುದು
ಶುಭ ಸಂಖ್ಯೆ :- 5-6-10 ಬಣ್ಣ :- ಹಳದಿ-ಕೆಂಪು-ಹಸಿರು
» ಕರ್ಕ : ನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು. ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಹ ಹದಗೆಡಿಸುತ್ತದೆ.
ಪರಿಹಾರ : ದೇವರಲ್ಲಿ ನಂಬಿಕೆ ಇಡಿ ಮತ್ತು ಇಷ್ಟ ದೇವರ ಪೂಜೆ ಮಾಡಿ. ಅದರ ಮೂಲಕ ಅರೋಗ್ಯ ಉತ್ತಮವಾಗುತ್ತದೆ.
ಶುಭ ಸಂಖ್ಯೆ :- 4-5-1 ಬಣ್ಣ :- ಬಿಳಿ-ಕೆಂಪು-ಕೇಸರಿ
» ಸಿಂಹ : ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯದಿರಿ. ಆರೋಗ್ಯದ ಬಗ್ಗೆ ಗಮನ ಕೊಡಿ. ಓದುವ ಬಗೆ ಉತ್ತಮ ವಿದೆ.
ಪರಿಹಾರ : ನಿಮ್ಮ ನೆಚ್ಚಿನ ದೇವರ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಿ, ಪೂಜಿಸುವುದರಿಂದ ಕೆಲಸ ಮತ್ತು ವ್ಯವಹಾರ ಸುಧಾರಿಸುತ್ತದೆ.
ಶುಭ ಸಂಖ್ಯೆ :- 5-6-9-11 ಬಣ್ಣ :- ಕೆಂಪು-ಬಿಳಿ
» ಕನ್ಯಾ : ಇತರರ ವಿರುದ್ಧ ದ್ವೇಷ ಕಾರುವುದು ಬೇಡ. ನಿಮ್ಮ ತೊಂದರೆಗೆ ಭಗವಂತ ಇದ್ದಾನೆ. ಆರೋಗ್ಯದಲ್ಲಿ ಏರು-ಪೇರು.
ಪರಿಹಾರ : ಈದಿನ ಶುದ್ಧ ಜೇನುತುಪ್ಪವನ್ನು ದಾನ ಮಾಡಿ ಅರೋಗ್ಯವು ಉತ್ತಮವಾಗಿರುತ್ತದೆ.
ಶುಭ ಸಂಖ್ಯೆ :- 7-10-11-03 ಬಣ್ಣ :- ಕೆಂಪು-ನೀಲಿ-ಬೂದು
» ತುಲಾ : ಇಂದು ನಿಮ್ಮ ವ್ಯಕ್ತಿತ್ವ ಒಂದು ಸುಗಂಧದಂತೆ ಕೆಲಸ ಮಾಡುತ್ತದೆ. ಉತ್ಸಾಹ ನಿಮ್ಮ ಜೀವನದ ಪಥ ಬದಲಿಸುತ್ತದೆ. ಇಂದು ಒಳ್ಳೆಯ ದಿನ ಇದೆ.
ಪರಿಹಾರ : ಗಣೇಶ ಸ್ತೋತ್ರ ಮತ್ತು ಆರತಿ ಪಠಿಸುವುದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಶುಭ ಸಂಖ್ಯೆ :- 8-9-4 ಬಣ್ಣ :- ನೀಲಿ-ಬಿಳಿ-ಬೂದು
» ವೃಶ್ಚಿಕ :- ಸಕಾರಾತ್ಮಕ ಚಿಂತನೆಯ ಜೊತೆ ಹೆಚ್ಚುವರಿ ಹಣ ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆ ಭಾಗವಹಿಸಿ. ಒಳ್ಳೆದಿದೆ.
ಪರಿಹಾರ : ನಿಮ್ಮ ವೃತ್ತಿಪರ ಜೀವನದಲ್ಲಿ ಶುಭವನ್ನು ತರಲು ಅಗತ್ಯ ವಸ್ತು ದಾನ ಮಾಡಿ.
ಶುಭ ಸಂಖ್ಯೆ :- 8-1-5 ಬಣ್ಣ :- ಕೆಂಪು-ಬಿಳಿ-ಕೇಸರಿ
» ಧನು : ಖಂಡಿತವಾಗಿಯೂ ಆರೋಗ್ಯದ ಆರೈಕೆಯ ಅಗತ್ಯವಿದೆ. ನಿಮ್ಮ ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ದೂರದ ಸ್ಥಳದ ಸಂಬಂಧಿಗಳು ಇಂದು ನಿಮ್ಮನ್ನು ಸಂಪರ್ಕಿಸಬಹುದು.
ಪರಿಹಾರ : ಈದಿನ ಖುಷಿ ಪಡೆಯಲು ಎಂಟು ವರ್ಷದ ಒಳಗಿನ ಮಕ್ಕಳಿಗೆ ಆಹಾರ ನೀಡಿ.
ಶುಭಸಂಖ್ಯೆ :- 9-12-04 ಬಣ್ಣ :- ಕೇಸರಿ-ಬಿಳಿ
» ಮಕರ : ನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ಇಂದು ಖಂಡಿತವಾಗಿಯೂ ನಿಮಗೆ ಆರ್ಥಿಕ ತೊಂದರೆಗಳನ್ನು ನೀಡುತ್ತದೆ.
ಪರಿಹಾರ : ಯಶಸ್ವಿ ಆರ್ಥಿಕ ಜೀವನಕ್ಕಾಗಿ, ಬಡವರಿಗೆ ಕಪ್ಪು ಉಣ್ಣೆಯ ಕಂಬಳಿಯನ್ನು ದಾನ ಮಾಡಿ.
ಶುಭ ಸಂಖ್ಯೆ:- 10-11-02 ಬಣ್ಣ:- ನೀಲಿ-ಬೂದು-ಕಪ್ಪು
» ಕುಂಭ : ಇಂದು ಹಣದ ತುಂಬಾ ಅಗತ್ಯವಿದೆ. ಬೇಸರ- ತೊಂದರೆ ಮೊದಲಾದವು ಕಂಡು ಬರುತ್ತದೆ.
ಪರಿಹಾರ : ಪರಿಮಳಯುಕ್ತ ಪುಷ್ಪಗಳನ್ನು ದೇವರಿಗೆ ನೀಡುವುದರ ಮೂಲಕ ಆರ್ಥಿಕ ಲಾಭವಾಗುತ್ತದೆ.
ಶುಭ ಸಂಖ್ಯೆ :- 11-03-06 ಬಣ್ಣ:- ನೀಲಿ-ಬೂದು
» ಮೀನ : ಇಂದು ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ ನೀವು ಇಂದು ಹಣವನ್ನು ಪಡೆಯಬಹುದು.
ಪರಿಹಾರ : ಮಲಗುವ ಕೋಣೆಯಲ್ಲಿ ಕುಲದೇವರ ಫೋಟೋ ಇಡುವುದರಿಂದ ಕುಟುಂಬದ ಸಂತೋಷವು ಹೆಚ್ಚಾಗುತ್ತದೆ.
ಶುಭ ಸಂಖ್ಯೆ :- 12-1-8-5 ಬಣ್ಣ:- ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ದಿನ ಪಂಚಾಂಗ | ಇವತ್ತು ಯಾವ್ಯಾವ ಸಮಯ ಶುಭ? ಯಾವ ಸಮಯ ಅಶುಭ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200