ದಿನ ಭವಿಷ್ಯ | 22 ಆಗಸ್ಟ್‌ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಶುಭ ಸಂಖ್ಯೆ ಎಷ್ಟು?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

DINA BHAVISHYA, 22 AUGUST 2024

ಮೇಷ : ಈ ದಿನ ಹೊಸತನ್ನು ನಿರೀಕ್ಷಿಸಿದರೂ ನೆನ್ನೆಯ ಭವಿಷ್ಯ ಇದ್ದೇ ಇದೆ. ಗುರು ಶುಭನಾಗಿದ್ದೂ, ಶುಕ್ರ ಬದಲಾವಣೆಯಿಂದ ನೆಮ್ಮದಿ ಇದೆ. ಸುಬ್ರಹ್ಮಣ್ಯನನ್ನೇ ಆರಾಧಿಸಿ .ಶುಭ ಸಂಖ್ಯೆ: 1-5-8-9

ವೃಷಭ : ನಾಲ್ಕರ ರವಿ ಇಷ್ಟದಾಯಕನಾಗಿದ್ದಾನೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅಡಚಣೆ. ಚೌತಿಯ ಗಣೇಶ ಪೂಜೆಯಿಂದ ಅನುಕೂಲದೊಂದಿಗೆ ಎಲ್ಲರಿಗೂ ಶುಭವಾಗಲಿದೆ. ಶುಭ ಸಂಖ್ಯೆ 2-7-10-11

ಮಿಥುನ : ಈ ದಿನ ಮೌನದಲ್ಲಿದ್ದರೇ ಒಳಿತು. ಮನೋಕ್ಲೇಷ ಹೆಚ್ಚಾದೀತು ಜೋಪಾನ. ಒಳ್ಳೆಯದೂ ಇದ್ದೇ ಇದೆ. ಕಾರ್ಯ ಒತ್ತಡಕ್ಕೆ ಹೆದರಬೇಡಿ. ಈಶ್ವರನಿಗೆ ಹಾಲಿನ ಅಭಿಷೇಕ ಪೂಜೆ ಸಲ್ಲಿಸಿ. ಶುಭ ಸಂಖ್ಯೆ : 5-6-10

ಕರ್ಕ : ನೆನ್ನೆಯ ಶುಭ ಇಂದು ಅಶುಭವೆನಿಸಬಹುದು. ಏಕಾದಶದ ಗುರು ನಿಮಗೆ ಬುದ್ಧಿಯ ರೂಪದಲ್ಲಿ ಅನುಗ್ರಹಿಸುತ್ತಾನೆ. ಮಕ್ಕಳಿಗೆ ಶುಭವಿದೆ. ಉತ್ತಮ ಆರೋಗ್ಯ. ಅನ್ನದಾನ ಮಾಡಿ. ಶುಭ ಸಂಖ್ಯೆ : 4-5-1

ಸಿಂಹ : ಇಂದಿನ ದಿನವೇ ಶುಭದಿನ ನಿಮ್ಮದು.  ಅಭಿವೃದ್ಧಿಯ ಹಾದಿ ಸುಗಮ. ಹಣದ ಖರ್ಚಿನ ಬಗ್ಗೆ ಗಮನ ಬೇಡ. ನೆಮ್ಮದಿ ಹೋದೀತು. ನವಗ್ರಹಗಳಿಗೆ ನಮಸ್ಕರಿಸಿ. ಶುಭ ಸಂಖ್ಯೆ : 5-6-9-11

ಕನ್ಯಾ : ನಿಮ್ಮ ಭಯ ಹಾಗೇ ಇದೆ. ಹೆದರಬೇಡಿ. ಆರೋಗ್ಯ ಏರುಪೇರು. ಗುರು ಅನುಕೂಲನಾಗಿದ್ದಾನೆ. ಕೆಂಪು ವಸ್ತ್ರದ ಬಟ್ಟೆ ಶುಭವಾಗಲಿದೆ ಧರಿಸಿ. ಗಣೇಶನ ಪೂಜೆ ಮಾಡಿ. ಶುಭ ಸಂಖ್ಯೆ : 7-10-11-03

SANDESH-UPADHYA-DINA-BHAVISHYA-SHIMOGA

ತುಲಾ : ಹನ್ನೆರಡರ ಕೇತು ಮಾತಿನ ಮನಸ್ತಾಪ ನೀಡಬಹುದು. ಮಕ್ಕಳಿಂದ ಮನಸ್ಸಿಗೆ ನೆಮ್ಮದಿ. ಶನಿಯ ಕೃಪೆ ನಿಮಗಿದೆ. ಸುಬ್ರಹ್ಮಣನ ಸ್ತೋತ್ರ ಪಠಣೆ ಮಾಡಿ. ಅನುಕೂಲವಾಗಲಿದೆ. ಶುಭ ಸಂಖ್ಯೆ : 8-9-4

ವೃಶ್ಚಿಕ : ಈದಿನ ಬಂಧುಗಳಿಂದ ಅನುಕೂಲ. ಯತ್ನ ಕಾರ್ಯ ಮಂದಗತಿ. ಪಂಚಮದ ರಾಹುವಿನ ಕೃಪೆ ಅಲಭ್ಯ. ವಿನಾಯಕನನ್ನು ಸ್ತುತಿಸಿ. ಶುಭ ಸಂಖ್ಯೆ : 8-1-5

ಧನು : ನಿಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ನಡೆಯುವ ದಿನ. ನೆನ್ನೆಯ ತಾಳ್ಮೆ ಇಂದು ಇದ್ದರೇ ಮಾತ್ರ. ಹುರುಳಿ ದಾನ ಮಾಡಿ. ಶುಭ ಸಂಖ್ಯೆ : 9-12-04

ಮಕರ : ಹಣದ ಅಡಚಣೆ ಇಲ್ಲದಿದ್ದರೂ. ಯೋಚನೆ ನಿಮ್ಮಲ್ಲಿದೆ. ಭಗವಂತನ ಸ್ಮರಣೆ ಬಹಳ ಮುಖ್ಯ. ಶುಭ ಸಂಖ್ಯೆ: 10-11-02

ಕುಂಭ : ನೀವು ಶಿವನ ಆರಾಧನೆ ಮುಂದುವರೆಸಿ. ಏನು ತೊಂದರೆ ಇಲ್ಲ.  ಆದರೆ ಆರೋಗ್ಯದಲ್ಲಿ ಏರುಪೇರು. ಆಂಜನೇಯ ಸ್ಮರಣೆ ಸಂಜೀವಿನಿ ಆಗುತ್ತದೆ. ಶುಭ ಸಂಖ್ಯೆ : 11-03-06

ಮೀನ : ರಾಶಿಯ ರಾಹು ಸಿಟ್ಟಿಗೆ ಬುದ್ಧಿ ನೀಡಿದ್ದಾನೆ. ಮಕ್ಕಳ ಮೇಲೆ ಸಿಟ್ಟು. ವೃಥಾ ಕೋಪ. ಗುರುಗಳ ಆರಾಧನೆಯಲ್ಲಿ ಭಾಗವಹಿಸಿ. ಪೂಜೆ ಮಾಡಿಸಿ. ಶುಭ ಸಂಖ್ಯೆ : 12-1-8-5

ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಇದೇ ಮೊದಲು ಸೇನೆಗೆ ಅಗ್ನಿವೀರರ ನೇಮಕಾತಿ ರ‍್ಯಾಲಿ, ನಾಳೆಯಿಂದ ಆಯ್ಕೆ ಶುರು, ಹೇಗಿದೆ ಸಿದ್ಧತೆ?

Leave a Comment