ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 DECEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮೇಷ
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಖರ್ಚು ವೆಚ್ಚಗಳ ಮೇಳೆ ನಿಗಾ ಇರಲಿ. ನೆರೆಹೊರೆಯವರೊಂದಿಗೆ ಜಗಳ ಸಾಧ್ಯತೆ. ಸಂಗಾತಿ ಜೊತೆಗೆ ಹೆಚ್ಚು ಸಮಯ ಕಳೆಯಿರಿ.
ವೃಷಭ
ಸ್ನೇಹಿತರೊಂದಿಗೆ ಸುತ್ತಾಟ. ಹಣದ ಖರ್ಚಿನ ಮೇಲೆ ನಿಗಾ ಇರಲಿ. ಸಂಬಂಧಿಕರು ಮನೆಗೆ ಬರುವ ಸಾಧ್ಯತೆ. ಯೋಜನೆಗಳು ತಲೆಕೆಳಗಾಗಬಹುದು ಎಚ್ಚರ.
ಮಿಥುನ
ಹಠಾತ್ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ವ್ಯಾಪಾರ, ವ್ಯವಹಾರದ ಉದ್ದೇಶಕ್ಕೆ ಹೆಚ್ಚು ಸುತ್ತಾಡಬೇಕಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.
ಕರ್ಕಾಟಕ
ಸಾಲ ಸಿಗಲಿದೆ. ಯಾವುದೆ ಕೆಲಸಕ್ಕೆ ಮುನ್ನ ಪೋಷಕರ ಆಶೀರ್ವಾದ ಅಗತ್ಯ. ವೈವಾಹಿಕ ಜೀವನದ ಏರಿಳಿತದಿಂದ ನೊಂದಿದ್ದೀರ. ಇವತ್ತು ಶುಭ ಸುದ್ದಿ ಸಿಗಲಿದೆ.
ಸಿಂಹ
ತಂದೆಯ ಸಲಹೆ ಪಡೆದು ಮುಂದುವರೆದರೆ ಲಾಭ. ಅನುಭವಿಗಳ ಜೊತೆಗಿನ ಒಡನಾಟದಿಂದ ಅನುಕೂಲಕರ. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು.
ಕನ್ಯಾ
ಉತ್ತಮ ಕೆಲಸಕ್ಕಾಗಿ ಕೆಲಸದ ಸ್ಥಳದಲ್ಲಿ ಗೌರವ ಲಭಿಸಲಿದೆ. ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಈ ಹಿಂದಿನ ನಿಮ್ಮ ಹೂಡಿಕೆಗಳಿಂದ ಲಾಭ ಸಿಗಲಿದೆ.
ತುಲಾ
ಪ್ರಸಿದ್ಧಿ ಪಡೆಯಬಹುದು. ಇವತ್ತು ನಿಮ್ಮ ಬಳಿ ಹೇರಳ ಸಮಯ ಇದ್ದರೂ ಯಾವುದೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆರೋಗ್ಯದ ಕಡೆ ಗಮನವಿರಲಿ.
ವೃಶ್ಚಿಕ
ಗ್ರಹ, ನಕ್ಷತ್ರಗಳ ಚಲನೆಯಿಂದಾಗಿ ನಿಮಗೆ ಹಣ ಸಂಪಾದಿಸಲು ಹಲವು ಅವಕಾಶ ಲಭಿಸಲಿದೆ. ಕೌಟುಂಬಿಕ ಸಮಸ್ಯೆ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತೀರ.
ಧನು
ನಿಮ್ಮ ವ್ಯಕ್ತಿತ್ವದಿಂದಾಗಿ ಹೊಸ ಸ್ನೇಹಿತರನ್ನು ಸಂಪಾದಿಸುತ್ತೀರಿ. ಸಮಯ ಪರಿಪಾಲನೆ ಮಾಡುವುದರಿಂದ ನಿಮಗೆ ಮತ್ತು ಕುಟುಂಬಕ್ಕೆ ಲಾಭವಾಗಲಿದೆ.
ಮಕರ
ಆರೋಗ್ಯದಲ್ಲಿ ಏರುಪೇರು. ಹಳೆಯ ಕಾಯಿಲೆ ಉಲ್ಬಣಿಸಬಹುದು. ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ಸೃಜನಶೀಲತೆ ಪ್ರದರ್ಶನ ಇವತ್ತು ಒಳ್ಳೆಯದಲ್ಲ.
ಕುಂಭ
ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ. ವಿದೇಶಿ ವ್ಯವಹಾರ ನಡೆಸುತ್ತಿದ್ದರೆ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ ಲಭಿಸುವುದು.
ಮೀನ
ಪ್ರೀತಿಪಾತ್ರರೊಂದಿಗೆ ವಾದ, ವಿವಾದ ಉಂಟಾಗಬಹುದು. ಪ್ರಭಾವಿಗಳ ಬೆಂಬಲದಿಂದ ನೈತಿಕ ಸ್ಥೈರ್ಯ ಸಿಗಲಿದೆ. ಕೆಲಸದ ಸ್ಥಳದಲ್ಲಿ ಯಾರ ಸಹಾಯದ ನಿರೀಕ್ಷೆ ಮಾಡಬೇಡಿ.
ಇದನ್ನೂ ಓದಿ – ಭದ್ರಾವತಿಯಲ್ಲಿ ವೀರಾಂಜನೇಯ ಸ್ವಾಮಿ ಅದ್ಧೂರಿ ರಥೋತ್ಸವ, ಹೇಗಿತ್ತು ಉತ್ಸವ?