ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA | 27 AUGUST 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮೇಷ : ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ. ಚತುರ್ಥದ ದೋಷ ನೆಮ್ಮದಿ ಹಾಳು ಮಾಡಬಹುದು. ವಿದ್ಯೆಗೆ ಪ್ರಶಸ್ತ ದಿನ. ಆರೋಗ್ಯದ ಬಗ್ಗೆ ಎಚ್ಚರ. ಲಕ್ಷ್ಮೀನೃಸಿಂಹ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 1-5-8-9
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವೃಷಭ : ಇಂದು ತೊಂದರೆ ದೂರವಾಗುವ ದಿನ. ಯತ್ನ ಕಾರ್ಯದಲ್ಲಿ ಸಫಲತೆ ತಡವಾಗಲಿದೆ. ಮಕ್ಕಳಿಗೆ ತೊಂದರೆಯಾದೀತು. ಮಿತ್ರರ ಸಹವಾಸದಿಂದ ನೆಮ್ಮದಿ ಬರುತ್ತದೆ. ದೇವಿಗೆ ತುಪ್ಪದ ದೀಪ ಹಚ್ಚಿ. ಶುಭ ಸಂಖ್ಯೆ : 2-7-10-11
ಮಿಥುನ : ಯೋಚಿಸಿ ಮಾತನಾಡಿ. ಆರ್ಥಿಕ ನಷ್ಟವಾಗಬಹುದು. ಭಾಗ್ಯದ ಮಿತ್ರ ತಡವಾದರೂ ಉತ್ತಮ ಫಲ ನೀಡುತ್ತಾನೆ. ಕೆಲಸದಲ್ಲಿ ತೊಂದರೆ. ಸುಪ್ರಭಾತದ ಆಲೈಸುವಿಕೆ ಮನಸ್ಸಿಗೆ ನೆಮ್ಮದಿ. ಶುಭ ಸಂಖ್ಯೆ : 5-6-10
ಕರ್ಕ : ಮಾತೇ ಮುತ್ತು ಮಾತೇ ಮೃತ್ಯು ಗಾದೆಯಂತೆ ನಿಮ್ಮ ಈದಿನ. ಹಾಗಾಗಿ ಯೋಚಿಸಿ. ನಿರ್ಧರಿಸಿ ಕೆಲಸ ಮಾಡಿ. ನವಮದ ರಾಹು ತೊಂದರೆ ಮಾಡುವ ಯೋಚನೆಯಲ್ಲಿ ಇದ್ದಾನೆ. ಭಾಗ್ಯೋದಯ ಅಲ್ಪ ಮಾತ್ರ ನವಗ್ರಹ ಪೂಜೆ ಮಾಡಿಸಿ. ಶುಭ ಸಂಖ್ಯೆ : 4-5-1
ಸಿಂಹ : ನಿಮ್ಮ ಗತ್ತು ಹಾಗೇ ಇರಲಿದೆ. ಆದರೆ ಹಣದ ವಿಚಾರಕ್ಕೆ ಹಿಂದೆ ಸರಿಯುವಿರಿ. ಪತ್ನಿಯಿಂದ ಕಿರಿಕಿರಿ. ಉದ್ಯೋಗ ಉತ್ತಮ. ಅಧಿಕ ವ್ಯಯ. ಗಣೇಶನನ್ನ ಸ್ತುತಿಸಿ. ಅನುಕೂಲಕರ. ಶುಭ ಸಂಖ್ಯೆ : 5-6-9-11
ಕನ್ಯಾ : ಈದಿನ ಸರ್ಪನ ಆರಾಧನೆ ಬಹಳ ಮುಖ್ಯ. ಮುಟ್ಟಿದ ಕೆಲಸ ಮುಗಿಯುವುದಿಲ್ಲ. ಮನೋಕ್ಲೇಶದ ಜೊತೆ ಆರೋಗ್ಯ ಸಮಸ್ಯೆ. ಸಪ್ತಶತಿ ಪಾರಾಯಣ ಮಾಡಿಸಿ..ಶುಭ ಸಂಖ್ಯೆ : 7-10-11-03
ತುಲಾ : ಪಂಚಮದ ಶನಿ ನಿಧಾನವಾಗಿ ಶುಭಕರನಾಗಿದ್ದಾನೆ. ಆದರೂ ಕಿರಿಕಿರಿ. ಅಧಿಕ ವ್ಯಯ. ವೃಥಾ ತಿರುಗಾಟ. ನಾಗನಿಗೆ ತನು ಸೇವೆ ಮಾಡಿಸಿ. ಶುಭ ಸಂಖ್ಯೆ : 8-9-4
ವೃಶ್ಚಿಕ : ನಾಲ್ಕರ ಶನಿ ಐದರ ರಾಹು ನವಮದ ಬುಧ ಬಹಳ ಉತ್ತಮ ಫಲ ನಿರೀಕ್ಷಿಸಲಾರಿರಿ. ಹಿಂದಿನ ಖುಷಿ ಸ್ವಲ್ಪ ಕಡಿಮೆ ಆದೀತು. ಕೆಲಸದಲ್ಲಿ ಉತ್ತಮ ಫಲ. ಅಂದುಕೊಂಡ ಕೆಲಸದಲ್ಲಿ ಬೇಸರ. ಆದಿತ್ಯ ಹೃದಯ ಓದಿ. ಶುಭ ಸಂಖ್ಯೆ : 8-1-5
ಧನು : ನಿಮ್ಮ ಅದೃಷ್ಟ ಈದಿನ ಕೈ ಹಿಡಿಯಲಿದೆ. ನಿಮ್ಮ ಭಾಗ್ಯದ ರವಿ ಅನುಗ್ರಹ ಮಾಡಿದ್ದಾನೆ. ನಿಮ್ಮ ಕೆಲಸವೇ ನಿಮಗೆ ತೊಂದರೆ. ವೆಂಕಟೇಶನಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಆರಾಧಿಸಿ. ಶುಭ ಸಂಖ್ಯೆ : 9-12-04
ಮಕರ : ಹಣ ಬಂದರೂ ವ್ಯಯ ಹೆಚ್ಚು. ಅಣ್ಣ ತಮ್ಮಂದಿರಿಗೆ ಸಹಾಯ ಮಾಡುವ ದಿನ. ಮನೆಯಲ್ಲಿ ವಿರಸ. ಅನ್ಯ ವಿಷಯ ಇಂದು ಗೌಪ್ಯವಾಗಿಡಿ. ನಾಗನ ಪೂಜೆ ಮಾಡಿಸಿ. ಶುಭ ಸಂಖ್ಯೆ: 10-11-02
ಕುಂಭ : ರಾಶಿಯ ಶನಿ ತೊಂದರೆ ಇಲ್ಲದಿದ್ದರೂ ಹೆಚ್ಚು ಖುಷಿ ನೀಡಲಾರ. ಸಾಡೇಸಾತಿಯಿಂದ ತೊಂದರೆ ಇಲ್ಲ. ಪತ್ನಿ ಕಷ್ಟಕ್ಕೆ ಸಹಾಯ ಮಾಡುತ್ತಾಳೆ. ತಾಳ್ಮೆ ಬೇಕು ನಿಮಗೆ. ಕೆಲಸದ ಬಗ್ಗೆ ಗಮನ ಅಗತ್ಯ. ಶುಭ ಸಂಖ್ಯೆ : 11-03-06
ಮೀನ : ಸಿಟ್ಟು ಕಡಿಮೆ ಮಾಡಿಕೊಳ್ಳಿ. ಅದೃಷ್ಟದ ಬಾಗಿಲು ಹಾಕಬಹುದು. ನಿಮ್ಮ ಬುದ್ಧಿ ನಿಮಗೆ ವ್ಯಯ ಮಾಡಿಸಲಿದ್ದಾನೆ. ಪಂಚಮದ ಬುಧ ಮನಸ್ಸಿಗೆ ನೋವು. ರಾಯರನ್ನ ಆರಾಧಿಸಿ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ಟೋಲ್ ವಿರುದ್ಧ ಗರಂ, ಶಿವಮೊಗ್ಗದಲ್ಲಿ ಹೋರಾಟಕ್ಕೆ ದಿನಾಂಕ ಫಿಕ್ಸ್, ಸಮಿತಿ ಆರೋಪಗಳೇನು?