DINA BHAVISHYA | 27 JANUARY 2025
ಮೇಷ : ಸಂಪಾದನೆ ಮಧ್ಯಮ. ಮಕ್ಕಳ ಬಗ್ಗೆ ಗಮನವಿರಲಿ. ಆರೋಗ್ಯದಲ್ಲಿ ಏರುಪೇರು. ಅನಗತ್ಯ ಧನವ್ಯಯ. ಸುಬ್ರಹ್ಮಣ್ಯನನ್ನ ಆರಾಧಿಸಿ. ಶುಭ ಸಂಖ್ಯೆ: 1-5-8-9
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ವೃಷಭ : ಗುರುವಿನ ಬಲವಿಲ್ಲ. ಯತ್ನ ಕಾರ್ಯದಲ್ಲಿ ವಿಫಲ. ಪಂಚಮದ ಕೇತು ತೊಂದರೆ ಮಾಡಿಯಾನು. ತಾಳ್ಮೆ ಯಿಂದ ಇರಿ. ಗಣೇಶ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 2-7-10-11
ಮಿಥುನ : ನೀವು ನವಮದ ಶನಿಯಿಂದ ಭಾಗ್ಯೋದಯವನ್ನು ನಿರೀಕ್ಷಿಸಬೇಡಿ. ಸಂಬಂಧದಿಂದ ಮಾತಿನ ಗಾಯ. ಆಲಸ್ಯವನ್ನು ದೂರವಿಡಿ. ಶುಭಫಲ ಖಂಡಿತ ಲಭ್ಯ. ಮಹಾದೇವನಿಗೆ ಪೂಜೆ ಸಲ್ಲಿಸಿ. ಶುಭ ಸಂಖ್ಯೆ : 5-6-10
ಕರ್ಕ : ಶುಭಫಲವಾದ ರಾಶಿ ನಿಮ್ಮದು. ಧನಾಗಮನ. ಎಂಟರ ಶನಿ ಒಳ್ಳೆಯದನ್ನು ಮಾಡುತ್ತಾನೆ. ಗಣೇಶನ ಪ್ರಾರ್ಥನೆಯಿಂದ ಅನುಕೂಲ. ಶುಭ ಸಂಖ್ಯೆ : 4-5-1
ಸಿಂಹ : ನಿಮ್ಮ ರಾಶಿಗೆ ಇಂದು ಆನೆ ಬಲ. ಮುಟ್ಟಿದ್ದೆಲ್ಲಾ ಚಿನ್ನ. ಆದರೆ ಶತೃವಿನ ಬಗ್ಗೆ ಎಚ್ಚರವಿರಲಿ. ಜೊತೆಗಿರುವವರೆ ಶತೃ. ದುರ್ಗಾದೇವಿಗೆ ನಮಸ್ಕರಿಸಿ. ಶುಭ ಸಂಖ್ಯೆ : 5-6-9-11
ಕನ್ಯಾ : ಜೊತೆಗಿರುವ ಶತೃ ಇನ್ನೂ ದೂರವಾಗಿಲ್ಲ. ನಿಮ್ಮ ಮಾತು ನಿಮ್ಮ ನಡೆ ಬೇರೆ ಬೇರೆ ಆಗುತ್ತದೆ. ಸಪ್ತದ ರಾಹು ಅಶುಭನಾಗಿದ್ದಾನೆ. ಎಚ್ಚರ. ನಾಗನಿಗೆ ಹಾಲಿನ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ : 7-10-11-03
ತುಲಾ : ಆರೋಗ್ಯದ ಬಗ್ಗೆ ಗಮನವಿರಲಿ. ಚಿಂತೆ ನಿಮ್ಮನ್ನು ಕಾಡುತ್ತದೆ. ಹಣ ಆಗಮನದ ನಿರೀಕ್ಷೆ ಖುಷಿ ನೀಡುತ್ತದೆ. ಈ ದಿನ ಬೆಲ್ಲ ತೊಗರಿ ದಾನ ಮಾಡಿ. ಶುಭವಿದೆ. ಶುಭ ಸಂಖ್ಯೆ : 8-9-4
ವೃಶ್ಚಿಕ : ಮಂಗಳ ಕಾರ್ಯಕ್ಕೆ ಪ್ರಶಸ್ತ ದಿನ. ವಿವಾಹ ಭಾಗ್ಯ ಕರುಣಿಸುವ ದಿನ. ದುರ್ಗಾ ದೇವಿಯನ್ನ ಸ್ತುತಿಸಿ. ಶುಭ ಸಂಖ್ಯೆ : 8-1-5
ಧನು : ನಿಮ್ಮ ದಾಯಾದಿಗಳಿಂದ ಸಮಸ್ಯೆ. ಕುಟುಂಬದಲ್ಲೂ ವಿರಸ. ಒಂಬತ್ತರ ಶುಕ್ರ ತೊಂದರೆ ನೀಡಿಯಾನು ತಾಳ್ಮೆ ಆಗತ್ಯ. ಶುಭವಿದೆ. ಶುಭ ಸಂಖ್ಯೆ : 9-12-04
ಮಕರ : ನಿಮ್ಮ ರಾಶಿಗೆ ಈದಿನ ಒಳ್ಳೆಯದಿದೆ. ನಿಧಾನವಾದ ಕೆಲಸ ಇಂದಿನಿಂದ ಚೇತರಿಗೆ ಕಾಣುತ್ತದೆ. ಆರ್ಥಿಕ ಚೇತರಿಕೆ. ಈಶ್ವರನ ಆರಾಧನೆ ಬಹಳ ಮುಖ್ಯ. ಶುಭ ಸಂಖ್ಯೆ: 10-11-02
ಕುಂಭ : ನೆನ್ನೆಯ ಚಾಲೀ ಮುಂದುವರೆಯಬಹುದು. ಬೇಸರ ಬೇಡ. ಮಹಾದೇವ ನಿಮ್ಮ ಕೆಲಸಕ್ಕೆ ಅನುಗ್ರಹ ನೀಡುತ್ತಾನೆ. ಶಿವ ಪಂಚಾಕ್ಷರ ಮಂತ್ರ ಜಪಿಸಿ. ಅನುಗ್ರಹ ಜಾಸ್ತಿ. ಶುಭ ಸಂಖ್ಯೆ : 11-03-06
ಮೀನ : ಬುದ್ಧಿಯ ಗೊಂದಲದಿಂದ ನಿಮಗೆ ಭ್ರಮೆ ಅನ್ನಿಸ ಬಹುದು. ಯೋಗಕ್ಕೋಸ್ಕರ ಕಾಯುವ ರಾಶಿ ನಿಮ್ಮದು. ಸುಬ್ರಹ್ಮಣ್ಯನಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ನಮ್ಮೂರಲ್ಲೇ ರೆಡಿಯಾಗುತ್ತವೆ ಈ ಬಟ್ಟೆ, ಇದನ್ನು ಧರಿಸಿದರೆ ಆರೋಗ್ಯವು ಉತ್ತಮವಾಗಿರುತ್ತೆ, ಎಲ್ಲಿದೆ ಅಂಗಡಿ?