ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 4 NOVEMBER 2024
♦ ಮೇಷ : ಕೋಪದ ಕೈಗೆ ಬುದ್ದಿ ಕೊಡುವುದು ಒಳ್ಳೆಯದಲ್ಲ. ಸ್ನೇಹಿತರೊಂದಿಗೆ ವಿರಸ ಸಾಧ್ಯತೆ. ಅನಗತ್ಯ ಸಮಯ ವ್ಯರ್ಥವಾಗಲಿದೆ. ಸಂಗಾತಿಯ ಅನಾರೋಗ್ಯದಿಂದ ಖರ್ಚು ಹೆಚ್ಚಲಿದೆ.
♦ ವೃಷಭ : ವ್ಯರ್ಥ ಆಲೋಚನೆಗಳು ನಿಮ್ಮ ಮನಸನ್ನು ಆವರಿಸಲಿದೆ. ಕುಟುಂಬದಲ್ಲಿ ವಿರಸ. ಉದ್ಯೋಗ ಸ್ಥಳದಲ್ಲಿ ಅನಗತ್ಯ ಕಿರಿಕಿರಿ. ಮೌನ ವಹಿಸುವುದು ಉತ್ತಮ.
♦ ಮಿಥುನ : ಕೆಲಸದ ಸ್ಥಳದಲ್ಲಿ ಅತ್ಯಂತ ಒತ್ತಡವಿರಲಿದೆ. ಇದರಿಂದ ಮಾನಸಿಕ ಶಾಂತಿ ಕದಡಲಿದೆ. ಮನೆಯಲ್ಲಿ ವಿನಾಕಾರಣ ಅಸಮಾಧಾನ. ಸಂಗಾತಿಯಿಂದ ನೆರವು.
♦ ಕರ್ಕಾಟಕ : ಕೆಲಸದ ನಡುವೆ ವಿಶ್ರಾಂತಿ ಲಭಿಸಲಿದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರೆ ಮನಸಿಗೆ ನೆಮ್ಮದಿ. ಸಂಬಂಧಿಗಳ ಮನೆಗೆ ಭೇಟಿ ನೀಡುತ್ತೀರಿ.
♦ ಸಿಂಹ : ದೀರ್ಘಕಾಲದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗಲಿದೆ. ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೀರಿ. ಸಂತೋಷದಿಂದ ಇರುವಿರಿ. ಸಂಗಾತಿಯೊಂದಿಗೆ ನೆಮ್ಮದಿ.
♦ ಕನ್ಯಾ : ಸ್ವಲ್ಪ ಪ್ರಮಾಣದ ಸಾಲ ತೀರಲಿದೆ. ಅವಕಾಶಗಳನ್ನು ಕೈ ಚೆಲ್ಲುತ್ತೀರಿ. ಅನೇಕರಿಂದ ಟೀಕೆ ಎದುರಿಸಬೇಕಾಗುತ್ತದೆ. ಮಾತಿನಲ್ಲಿ ನೈಜತೆ ಇರಲಿ.
♦ ತುಲಾ : ಖರ್ಚು, ವೆಚ್ಚದ ಮೇಲೆ ನಿಗಾ ಇರಲಿ. ಹಣದ ಅಪವ್ಯಯ ಆಗಲಿದೆ. ಯಾವುದೋ ಕಾರಣಕ್ಕೆ ಗಾಯಗೊಳ್ಳುವ ಸಾಧ್ಯತೆ ಇದೆ. ದೂರ ಪ್ರಯಾಣ. ನಿಮಗಾಗಿ ಹೆಚ್ಚಿನ ಸಮಯ ಮೀಸಲಿಡಿ.
♦ ವೃಶ್ಚಿಕ : ವಾಹನ ಚಾಲನೆ ವೇಳೆ ರಸ್ತೆ ಮೇಲೆ ಹೆಚ್ಚು ಗಮನವಿರಲಿ. ಹಣದ ಹರಿವು ಇರಲಿದೆ. ಇದರಿಂದ ದೊಡ್ಡ ಸಮಸ್ಯೆ ಪರಿಹಾರವಾಗಲಿದೆ. ಸ್ನೇಹಿತರೊಂದಿಗೆ ಸುಸಮಯ ಕಳೆಯುತ್ತೀರಿ.
♦ ಧನು : ಮನೆಗೆ ಸಂಬಂಧಿ ಆಗಮನ. ಮಕ್ಕಳ ಸಾಧನೆಯಿಂದ ನಿಮಗೆ ಸಂತೋಷ ಉಂಟಾಗಲಿದೆ. ಕುಟುಂಬದಲ್ಲಿಯು ನೆಮ್ಮದಿ. ಸಂಜೆ ವೇಳೆಗೆ ಸಂಗಾತಿಯೊಂದಿಗೆ ಮುನಿಸು.
♦ ಮಕರ : ಯೋಗ, ಧ್ಯಾನ, ಕ್ರೀಡೆಯ ಮೇಲೆ ಆಸಕ್ತಿ ಮೂಡಲಿದೆ. ನಿಮ್ಮ ಇಷ್ಟದ ಸಂಗೀತವನ್ನು ಕೇಳುವುದರಿಂದ ಮನಸಿಗೆ ನೆಮ್ಮದಿ. ನಿರುದ್ಯೋಗಿಯಾಗಿದ್ದರೆ ಇವತ್ತು ಉದ್ಯೋಗ ದೊರೆಯಲಿದೆ.
♦ ಕುಂಭ : ಹಣ ಉಳಿತಾಯ ಮತ್ತು ಹೂಡಿಕೆಯತ್ತ ಗಂಭೀರವಾಗಿ ಯೋಚಿಸಿ. ಇದು ದೀರ್ಘಕಾಲದ ಲಾಭ ತರಲಿದೆ. ಸ್ನೇಹಿತರು, ಸಂಗಾತಿಯ ಕಾರಣಕ್ಕೆ ದುಂದುವೆಚ್ಚ ಆಗಬಹುದು. ಮನೆಯಲ್ಲಿ ಸ್ವಲ್ಪ ಕಿರಿಕಿರಿ.
♦ ಮೀನ : ಆಹಾರ ಸೇವನೆ ನಿಯಂತ್ರಣದಲ್ಲಿರಲಿ. ವೈದ್ಯರನ್ನು ಕಾಣುವ ಸಂದರ್ಭ ಎದುರಾಗಲಿದೆ. ಸಣ್ಣಪುಟ್ಟ ಸಮಸ್ಯೆ ಹೊರತು ಇಡೀ ದಿನ ನೆಮ್ಮದಿಯಿಂದ ಇರುತ್ತೀರಿ.
ಇದನ್ನೂ ಓದಿ » ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ, ಟೈಮಿಂಗ್ ಏನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422