ಮೇಷ
ದಿನಚರಿ ಬದಲಾವಣೆಯಿಂದ ಬೇಸರ ನಿವಾರಣೆಯಾಗಬಹುದು. ಇತರರ ಮುಂದೆ ನೀವಾಗಿಯೇ ದೌರ್ಬಲ್ಯ ಪ್ರದರ್ಶಿಸಿ ಕಷ್ಟಕ್ಕೊಳಗಾಗಬೇಡಿ.
ವೃಷಭ
ಜನರ ಅಭಿಪ್ರಾಯ ಸಂಗ್ರಹಿಸಲು ಹೋಗಿ ಅಪಮಾನಕ್ಕೆ ಒಳಗಾಗುವ ಸಾಧ್ಯತೆ. ರಾತ್ರಿ ಸಂಚಾರದ ಸಂದರ್ಭ ನಿಶಾಚರಿಗಳಿಂದ ತೊಂದರೆ ಉಂಟಾಗಬಹುದು.
ಮಿಥುನ
ನಿತ್ಯ ಮಾಡುವ ಮತ್ತು ಕರಗತವಾಗಿರುವ ಕೆಲಸದಲ್ಲಿಯೆ ಗಡಿಬಿಡಿಯ ಕಾರಣ ವ್ಯತ್ಯಾಸ ಆಗುವ ಸಾಧ್ಯತೆ. ಸಮಾರಂಭದ ಭೋಜನದಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದು.
ಕರ್ಕಾಟಕ
ಬಯಸಿದ ಸ್ಥಾನಕ್ಕೆ ತೆರಳುವ ಅವಕಾಶವು ಸಿಗದೆ ಬಹಳ ಬೇಸರ. ಅನ್ನ ಸಂತರ್ಪಣೆ ಮಾಡುವುದರಿಂದ ಸಂತೃಪ್ತಿ. ನಕಲಿ ಜಾಹೀರಾತುಗಳಿಗೆ ಮಾರುಹೋಗದಿರಿ.
ಸಿಂಹ
ಉನ್ನತ ವ್ಯಾಸಂಗದ ಕುರಿತು ನಿಮ್ಮ ನಿಲುವನ್ನು ಉಪನ್ಯಾಸಕರಿಗೆ ತಿಳಿಸಿ ಅಭಿಪ್ರಾಯ ಪಡೆಯಿರಿ. ನಿಮ್ಮ ಸಂಶೋಧನೆಯು ಜಗದ್ವಿಖ್ಯಾತಿ ಪಡೆಯಲಿದೆ.
ಕನ್ಯಾ
ಉತ್ತಮ ಸ್ಥಾನಕ್ಕೆ ಬರಲು ಕಾರಣರಾದವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಉತ್ತಮ ಖಾದ್ಯಗಳ ಉತ್ಪಾದಕರಿಗೆ ಬೇಡಿಕೆ ಹೆಚ್ಚಾಗಲಿದೆ.
ತುಲಾ
ಪೋಷಕರಿಂದ ಅನಿರೀಕ್ಷಿತ ಪ್ರಶ್ನೆಗಳಿಗೆ ಬೆಚ್ಚಿಬೀಳುವ ಸಾಧ್ಯತೆ ಇದೆ. ಧೂಳಿನಿಂದ ಕಣ್ಣಿನ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಸಮಸ್ಯೆಗಳಾಗಬಹುದು.
ವೃಶ್ಚಿಕ
ನಿಶ್ಶಕ್ತಿ ನಿವಾರಣೆಗೆ ಉತ್ತಮ ಆಹಾರ ಸೇವಿಸುವ ಅನಿವಾರ್ಯವಿದೆ. ಉಳಿತಾಯದ ಹೆಸರಲ್ಲಿ ಎಲ್ಲೆಂದರಲ್ಲಿ ಖರೀದಿ ಮಾಡಲು ಹೋಗಿ ಮೋಸ ಹೋಗದಿರಿ.
ಧನು
ಬಂಧು ಮಿತ್ರರೊಂದಿಗೆ ಉಪಯುಕ್ತ ಮಾಹಿತಿ ಹಂಚಿಕೊಳ್ಳಿ. ಪ್ರಶಂಸೆಗೆ ಪಾತ್ರರಾಗುವಿರಿ. ಅಮೂಲ್ಯ ವಸ್ತುವಿನ ಲಭ್ಯವಾಗುವುದರಿಂದ ಸಂತೋಷ ಹೊಂದುವಿರಿ. ಸಣ್ಣಪುಟ್ಟ ವಿಷಯಗಳಿಗಾಗಿ ದುಃಖ ಪಡಬೇಡಿ.
ಮಕರ
ಸಣ್ಣ ಪುಟ್ಟ ಕಷ್ಟಗಳು ಹೆಚ್ಚಾಗಲಿವೆ. ಮುಂದೆ ಸುಖಮಯ ಜೀವನ ಸಾಗಿಸುವ ಅವಕಾಶ ಲಭ್ಯ. ಶುಭ ಕಾರ್ಯಗಳನ್ನು ಮುಂದಕ್ಕೆ ಹಾಕುವುದು ಅನಿವಾರ್ಯ ಆಗಬಹುದು.
ಕುಂಭ
ಮಕ್ಕಳ ಪ್ರತಿ ಹೆಜ್ಜೆಗೂ ವಿವಿಧ ಕಾರಣ ನೀಡಿ ಅವರನ್ನು ಅಸಮಧಾನ ಪಡಿಸಬೇಡಿ. ಅಪವಾದಗಳಿಗೆ ಹೆದರಿ ಯಾವುದೇ ಹೊಸ ಕೆಲಸ ಪ್ರಾರಂಭಿಸದೆ ಇರಬೇಡಿ.
ಮೀನ
ಕೆಲಸ ಕಾರ್ಯಗಳನ್ನು ಪದೇ ಪದೆ ನಿಲ್ಲಿಸುವ ಸನ್ನಿವೇಶ ಎದುರಾಗುತ್ತಲೇ ಇರುತ್ತವೆ. ವಿನಾಶಕಾರಿ ಪ್ರವೃತ್ತಿ ಪ್ರಯೋಗಿಸುವ ಯೋಚನೆ ಮಾಡದಿರಿ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200