ದಿನ ಭವಿಷ್ಯ | 9 ಡಿಸೆಂಬರ್‌ 2023 | ನಿಮ್ಮ ರಾಶಿಯ ಇವತ್ತಿನ ಭವಿಷ್ಯ ಹೇಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 DECEMBER 2023

ಮೇಷ

ಮುಂದಾಲೋಚನೆ, ವಿವೇಚನೆಯಿಂದ ನಡೆದುಕೊಂಡಲ್ಲಿ ಕೆಲಸದಲ್ಲಿ ಹೆಚ್ಚಿನ ಏಳಿಗೆ. ಉದ್ಯೋಗ ಸ್ಥಳದಲ್ಲಿ ಬಹುಕಾಲದಿಂದ ತಾಂತ್ರಿಕ ಸಮಸ್ಯೆ ನಿವಾರಣೆ ಆಗಲಿದೆ.

ವೃಷಭ

ಓದುವ ಹವ್ಯಾಸದಿಂದ ಯೋಚನಾ ಲಹರಿ ಬದಲಾವಣೆ. ದಿನದ ಮೊದಲ ಭಾಗ ಶ್ರಮ ಭರಿತ. ನಂತರ ಬಹಳ ವಿರಾಮ ಲಭಿಸಲಿದೆ.

ಮಿಥುನ

ಸಂಶೋಧನಾ ಕ್ಷೇತ್ರದಲ್ಲಿ ಪ್ರಗತಿ. ಅಲಂಕಾರಿಕ ವಸ್ತು ಖರೀದಿಸಲು ಹಣ ವ್ಯಯ ಮಾಡುವಿರಿ. ಸಂಬಂಧಿಯಿಂದ ನೆಮ್ಮದಿ.

ಕರ್ಕಾಟಕ

ಖಚಿತ ನಿರ್ಧಾರದಿಂದ ಯಶ ಸಾಧಿಸಬಹುದು. ಉದ್ದಿಮೆದಾರರಿಗೆ ಸ್ವಲ್ಪ ನಷ್ಟ ಸಂಭವಿಸಬಹುದು. ಕೆಲಸಗಾರರು ಸಿಗದೆ ಪರಿತಪಿಸುವಿರಿ.

ಸಿಂಹ

ಸ್ವ ಸಾಮರ್ಥ್ಯದಿಂದ ಉತ್ತಮ ಅವಕಾಶ ಲಭಿಸಲಿದೆ. ಜೀವನದ ಹಾದಿ ಬದಲಾಗಲಿದೆ. ವ್ಯಾಪಾರ, ವಾಹಿವಾಟಿನಲ್ಲಿ ಸಣ್ಣ ಲಾಭ.

ಕನ್ಯಾ

ವೃತ್ತಿಯಲ್ಲಿ ಬೆಳವಣಿಗೆಯಿಂದ ಸಂತಸ. ಮಹತ್ವದ ಕೆಲಸ ಕಾರ್ಯರೂಪ ಪಡೆಯಲಿದೆ. ದುರ್ಜನರ ದೃಷ್ಟಿ ದೋಷಕ್ಕೂ ಒಳಗಾಗುವಿರಿ. ಅತ್ಯಂತ ಕಠಿಣ ಕೆಲಸಕ್ಕೆ ಹೆಜ್ಜೆ ಇಡಲಿದ್ದೀರಿ.

ತುಲಾ

ಆತ್ಮವಿಶ್ವಾಸದಿಂದ ಸಾಧನೆ ಸಾಧ್ಯ. ಇತರರ ಅಸೂಯೆ ಪಡದಂತೆ ಕಾರ್ಯ ಸಾಧಿಸುವ ಗುಣ ನಿಮ್ಮಲ್ಲಿದೆ. ಯಶಸ್ಸನ್ನು ದೊರೆಯಲಿದೆ.

ವೃಶ್ಚಿಕ

ವೃತ್ತಿಯ ಬದುಕಿನಲ್ಲಿ ತಿರುವು ಲಭಿಸಲಿದೆ. ಅನ್ವೇಷಣಾ ಸ್ವಾಭಾವದಿಂದ ಉಪಯೋಗ. ಸಮಸ್ಯೆಗಳ ಪರಿಹಾರಕ್ಕೆ ಆಸಕ್ತಿ ವಹಿಸಿ. ಉತ್ತಮ ಅವಕಾಶ ದೊರೆಯಲಿದೆ.

ಧನು

ಶತ್ರುಗಳ ಪ್ರಾಬಲ್ಯವನ್ನು ಮಟ್ಟ ಹಾಕುವ ಸಮಯ. ಮಕ್ಕಳಿಗೆ ನೌಕರಿಯಲ್ಲಿ ಬಡ್ತಿ. ಚಟುವಟಿಕೆಯಿಂದ ದಿನ ಕಳೆಯುವಿರಿ.

ಮಕರ

ಬಹುಕಾಲದ ಸ್ನೇಹಿತರ ಭೇಟಿ. ಅವರ ಜೊತೆ ಮಾತುಕತೆ. ವ್ಯವಹಾರಗಳ ಕುರಿತು ಚರ್ಚೆ. ಹೊಸ ಹುರುಪು.

ಕುಂಭ

ಯೋಗಾಭ್ಯಾಸ ಮತ್ತು ವೈದ್ಯರ ಸಲಹೆಯಿಂದ ಆರೋಗ್ಯ ಸುಧಾರಣೆ. ದೃಢ ನಿಶ್ಚಯ ಹಾಗೂ ಸಾಧಿಸುವ ಛಲದಿಂದ ಯಶಸ್ಸು.

ಮೀನ

ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ಮನಸ್ಸಿಗೆ ಸಂತೃಪ್ತಿ. ರಹಸ್ಯ ಬೆಂಬಲದಿಂದ ಕನಸು ನನಸು. ನಿಮ್ಮ ಒಳ್ಳೆತನ ದುರುಪಯೋಗ ಆಗದಂತೆ ಎಚ್ಚರ ವಹಿಸಿ.

ಇದನ್ನೂ ಓದಿ – ಅಡಿಕೆ ಧಾರಣೆ | 8 ಡಿಸೆಂಬರ್‌ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment