| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS | 9 JANUARY 2024
ಮೇಷ
ಮನೆಯಲ್ಲಿ ಮದುವೆ ಮಾತುಕತೆ. ಕಚೇರಿಯಲ್ಲಿ ಕರ್ತವ್ಯ ಲೋಪದ ಕುರಿತು ಮೇಲಧಿಕಾರಿಗಳಿಗೆ ಅಸಮಾಧಾನ.
ವೃಷಭ
ಕೆಲಸದ ಸ್ಥಳದಲ್ಲಿ ಸ್ವಪ್ರಯತ್ನದ ಜೊತೆಗೆ ದೇವರ ಆಶೀರ್ವಾದ ಮುಖ್ಯ. ಮನೆ ದೇವರ ಪ್ರಾರ್ಥನೆಯಿಂದ ಫಲ ದೊರೆಯಲಿದೆ. ಊಹಾಪೋಹಕ್ಕೆ ಕಿವಿಗೊಡದಿರುವುದು ಸೂಕ್ತ.
ಮಿಥುನ
ಜೀವನ ಸುಗಮವಾಗಿ ಸಾಗುತ್ತಿದೆ. ಯಾವುದೆ ಬದಲಾವಣೆ ಕುರಿತು ಯೋಚಿಸದಿರುವುದು ಸೂಕ್ತ. ಮಿತ್ರರಿಂದ ಸಲಹೆ.
ಕರ್ಕಾಟಕ
ಮಕ್ಕಳ ಆರೋಗ್ಯದ ವಿಚಾರದಲ್ಲಿ ಖರ್ಚು ವೆಚ್ಚ. ಕಾರ್ಮಿಕರ ಬೇಡಿಕೆಗೆ ಮುಖ್ಯಸ್ಥರಿಂದ ಪೂರೈಕೆ.
ಸಿಂಹ
ನಿಷ್ಠೆಯಿಂದ ಕೆಲಸ ಮಾಡಿದರೆ ಹಂತ ಹಂತವಾಗಿ ಯಶಸ್ಸು ಪ್ರಾಪ್ತಿಯಾಗಲಿದೆ. ವಕೀಲರಿಗೆ ಪ್ರಕರಣದಲ್ಲಿ ಗೆಲವು ಸಾಧಿಸಲು ಅಗತ್ಯ ನೆರವು ದೊರೆಯಲಿದೆ.
ಕನ್ಯಾ
ಮನಸಲ್ಲಿ ಅಂದುಕೊಂಡಿರುವ ದೇವರ ಕೆಲಸಗಳನ್ನು ಮುಗಿಸಿ. ಜೀವನದಲ್ಲಿ ಯಶಸ್ಸು ದೊರೆಯಲಿದೆ. ಮತ್ತಷ್ಟು ಕೆಲಸ ಮಾಡುವ ಉತ್ಸಾಹ ಉಂಟಾಗಲಿದೆ.
ತುಲಾ
ಕಹಿ ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನಹರಿಸುವುದು ಸೂಕ್ತ. ಉದ್ಯಮದ ಕ್ಷೇತ್ರದಲ್ಲಿ ಹಿತಶತ್ರುಗಳ ಭಯ. ಅಹಾರ ಉದ್ಯಮವರಿಗೆ ಶುಭ ದಿನ.
ವೃಶ್ಚಿಕ
ಸಹೋದ್ಯೋಗಿಯ ಅನುಪಸ್ಥಿತಿಯಿಂದ ಕೆಲಸದಲ್ಲಿ ಗಡಿಬಿಡಿ. ಬಡ್ತಿ ಮುಂದೂಡಿಕೆ. ಚಿಂತೆ.
ಧನು
ಕೆಲಸದಲ್ಲಿ ಬಹು ಜನರ ಅಭಿಪ್ರಾಯದಿಂದ ಗೊಂದಲ. ಸ್ನೇಹಿತರ ಸಹಕಾರದಿಂದ ಮನೆ ನಿರ್ಮಿಸುವ ಕನಸು ನನಸಾಗಲಿದೆ.
ಮಕರ
ವಿದೇಶ ಪ್ರವಾಸದ ಕನಸು ನನಸಾಗಲಿದೆ. ದಿನಚರಿಯಲ್ಲಿ ಮಹತ್ವದ ಬದಲಾವಣೆ ಉಂಟಾಗಲಿದೆ. ಕೆಲಸ ಕಾರ್ಯದಲ್ಲಿ ವಿಳಂಬ.
ಕುಂಭ
ಸಂಗಾತಿಯ ಅಗಲುವಿಕೆ. ಗುರುವಿನ ಸಾನ್ನಿಧ್ಯ. ನಿಶ್ಚಲ ಭಕ್ತಿಯಿಂದ ಮನಸಿಗೆ ಶಾಂತಿ.
ಮೀನ
ಮನೆಯಲ್ಲಿ ನೆಮ್ಮದಿ ಇಲ್ಲವಾಗಲಿದೆ. ಶುದ್ಧ ಮನಸ್ಸಿನಿಂದ ಧರ್ಮ ಕಾರ್ಯದಲ್ಲಿ ತೊಡಗಿದರೆ ಅಭಿವೃದ್ಧಿ.
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗದಲ್ಲಿ ಪೊಲೀಸರ ದಾಳಿ, ಸಾಗರದ ವ್ಯಕ್ತಿ ಅರೆಸ್ಟ್, ಕಾರಣವೇನು?
- ದಿನ ಪಂಚಾಂಗ, ಇಂದಿನ ರಾಶಿ ಭವಿಷ್ಯ – ಓದಲು ಇಲ್ಲಿ ಕ್ಲಿಕ್ ಮಾಡಿ
- ಭದ್ರಾವತಿಯಲ್ಲಿ ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಶಿವಮೊಗ್ಗದಲ್ಲಿ ಸಾವು
- ಮಹಿಳೆಯರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ನಾಳೆ ಉತ್ಸವ್ ಮೇಳ, ಏನೇನೆಲ್ಲ ಇರುತ್ತೆ?
- ಅಡಿಕೆ ಧಾರಣೆ | 11 ಡಿಸೆಂಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
- ಶಿವಮೊಗ್ಗದಲ್ಲಿ ನಾಳೆ ಕಂದಾಯೋತ್ಸವ, ಎರಡು ದಿನ ಏನೇನು ಕಾರ್ಯಕ್ರಮ ನಡೆಯಲಿದೆ?
- ಮರದಿಂದ ಬಿದ್ದು ಕಾಳಿಂಗ ಸರ್ಪ ಸಾವು, ಎಲ್ಲಿ? ಹೇಗಾಯ್ತು?
- ಭದ್ರಾವತಿ ಆಕಾಶವಾಣಿಯಲ್ಲಿ ಹೆಲ್ತ್ ಹಿಂಟ್ಸ್, ಬದುಕು ಜಟಕಾಬಂಡಿ ಕಾರ್ಯಕ್ರಮ, ಟೈಮಿಂಗ್ ಏನು?
![]()