ಶಿವಮೊಗ್ಗ ಲೈವ್.ಕಾಂ | SHIMOGA | 12 ಮಾರ್ಚ್ 2020
ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಿಸಿದ್ದಕ್ಕೆ ಇವತ್ತು ಅವರ ಅಭಿಮಾನಿ ಬಳಗ, ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿತು. ಬಳಿಕ ಮಠದ ಮುಂದೆ ಕುಳಿತಿದ್ದ ಭಿಕ್ಷುಕರಿಗೆ ಮಾಸ್ಕ್ ವಿತರಿಸಿದರು.

ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ನೇತೃತ್ವದಲ್ಲಿ ಭಿಕ್ಷಕರು ಮತ್ತು ಬಡವರಿಗೆ ಮಾಸ್ಕ್ ವಿತರಿಸಲಾಯಿತು. ಕರೋನ ಭೀತಿಯಿಂದಾಗಿ ಎಲ್ಲರು ಮಾಸ್ಕ್ ಧರಿಸುತ್ತಿದ್ದಾರೆ. ಬಡವರಿಗೆ ಮಾಸ್ಕ್ ವಿತರಿಸುವ ಅಗತ್ಯವಿದೆ. ಹಾಗಾಗಿ ಮಾಸ್ಕ್ ನೀಡುತ್ತಿದ್ದೇವೆ ಎಂದು ಬಳಗದ ಪ್ರಮುಖರು ತಿಳಿಸಿದರು.
ಮಾಸ್ಕ್ ಜೊತೆಗೆ ನಿರ್ಗತಿಕರಿಗೆ ಹಣ್ಣು ವಿತರಿಸಲಾಯಿತು. ಪ್ರಮುಖರಾದ ಕವಿತಾ ಸೇರಿದಂತೆ ಹಲವರು ಈ ವೇಳೆ ಇದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
