ಶಿವಮೊಗ್ಗ ಲೈವ್.ಕಾಂ | SHIMOGA | 29 ಡಿಸೆಂಬರ್ 2019
ನಾನಾ ತಳಿಯ ಶ್ವಾನಗಳು. ಎತ್ತಿ ಮುದ್ದಾಡಬೇಕು ಅನಿಸುವ ಬೆಕ್ಕುಗಳು. ನಾಯಿಗಳ ಚಿನ್ನಾಟ. ಬೆಕ್ಕುಗಳ ಮುಗ್ದ ನೋಟ. ಮಕ್ಕಳಿಗೆ ಖುಷಿಯೋ ಖುಷಿ. ಹಿರಿಯರಿಗೆ ಕುತೂಹಲ.
ಇದು ಇವತ್ತು ವಿನೋಬನಗರದ ಡಿವಿಎಸ್ ಶಾಲೆ ಆವರಣದಲ್ಲಿ ಕಂಡು ಬಂದ ದೃಶ್ಯ. ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಡಾಗ್ ಅಂಡ್ ಕ್ಯಾಟ್ ಶೋ ಆಯೋಜಿಸಲಾಗಿತ್ತು. ನಾನಾ ತಳಿಯ 250ಕ್ಕೂ ಹೆಚ್ಚು ಶ್ವಾನಗಳು, ಬೆಕ್ಕುಗಳು ಇದರಲ್ಲಿ ಭಾಗವಹಿಸಿದ್ದವು.
ಎತ್ತಿ ಮುದ್ದಾಡಿದರು, ಫೋಟೊ ಕ್ಲಿಕ್ಕಿಸಿಕೊಂಡರು
ಶ್ವಾನ ಪ್ರಿಯರು ಅವುಗಳನ್ನು ಎತ್ತಿ ಮುದ್ದಾಡಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡರು. ಮಕ್ಕಳಂತು ನಾಯಿ, ಬೆಕ್ಕುಗಳ ಮೈ ಮುಟ್ಟಿ ಖುಷಿ ಪಟ್ಟರು.
ಗಮನ ಸೆಳೆದ ‘ನಾನು ಮತ್ತು ಗುಂಡ
ಡಾಗ್ ಶೋನ ಪ್ರಮುಖ ಹೈಲೈಟ್, ಇನ್ನಷ್ಟೆ ತೆರೆ ಕಾಣಬೇಕಿರುವ, ನಾನು ಮತ್ತು ಗುಂಡ ಸಿನಿಮಾದ ಟೀಂ. ಚಿತ್ರದ ನಾಯಕ ನಟ ಶಿವರಾಜ್ ಕೆ.ಆರ್.ಪೇಟೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಗುಂಡ ಅನ್ನುವ ಶ್ವಾನವು ಶೋನಲ್ಲಿ ಭಾಗವಹಿಸಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Dog and Cat Show in Shimoga Vinobhanagara. Actor Shivaraj KR Pete and Naanu Mathu Gunda Cinema team participated in the event.
