ಶಿವಮೊಗ್ಗ ಲೈವ್.ಕಾಂ | 22 ಫೆಬ್ರವರಿ 2019
ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿಯಾಗಿ ಡಾ.ಅಶ್ವಿನಿ ಅಧಿಕಾರ ವಹಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಭಿನವ್ ಖರೆ ಅವರು ಡಾ.ಅಶ್ವಿನಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಶಿವಮೊಗ್ಗದ ಮೊದಲ ಮಹಿಳೆ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದಾರೆ.

ಇದಕ್ಕೂ ಮೊದಲು, ನೂತನ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಗಾರ್ಡ್ ಆಫ್ ಹಾನರ್ ನೀಡಲಾಯಿತು.
ಕ್ರೈಂ ಕಂಟ್ರೋಲ್ ಮಾಡುವುದೇ ಗುರಿ
ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ, ಶಿವಮೊಗ್ಗ ಜಿಲ್ಲೆ ಸಾಹಿತ್ಯಕ್ಕೆ ಹೆಸರಾಗಿದೆ. ಹಾಗೆಯೇ, ಇಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇದನ್ನು ನಿಯಂತ್ರಿಸುವುದೇ ತಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.

ತಪ್ಪಿತಸ್ಥರ ಬಗ್ಗೆ ಮೆಸೇಜ್ ಮಾಡಿದರೆ ಸಾಕು
ಇನ್ನು, ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ, ಶಿವಮೊಗ್ಗದ ಸಾರ್ವಜನಿಕರ ನೆರವು ಅಗತ್ಯ ಅಂತಾ ತಿಳಿಸಿದ ಎಸ್.ಪಿ ಡಾ.ಅಶ್ವಿನಿ, ಅಪರಾಧ ಪ್ರಕರಣಗಳ ಕುರಿತು ಸಾರ್ವಜನಿಕರು ತಮ್ಮ ಮೊಬೈಲ್’ಗೆ ಮೆಸೇಜ್ ಕಳುಹಿಸಿದರೆ ಸಾಕು. ಹೆಸರು ಹೇಳುವ ಅಗತ್ಯವೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.







ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]