ಶಿವಮೊಗ್ಗ ಲೈವ್.ಕಾಂ | SHIMOGA NEWS | 26 JANUARY 2021
ರೈತರ ಟ್ರಾಕ್ಟರ್ ಪರೇಡ್ನಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಟ್ರಾಕ್ಟರ್ ಚಲಾಯಿಸಿ ಎಲ್ಲರ ಗಮನ ಸೆಳೆದರು. ರೈತರು ತಂದಿದ್ದ ಟ್ರಾಕ್ಟರ್ ಪಡೆದು ಪರೇಡ್ನಲ್ಲಿ ಚಲಾಯಿಸಿದರು.
ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ಪಕ್ಕದ ರಸ್ತೆಯಲ್ಲಿ ಬಹಿರಂಗ ಸಭೆಯ ವೇದಿಕೆ ಸಮೀಪದವರೆಗೂ ಡಾ.ರಾಜನಂದಿನಿ ಟ್ರಾಕ್ಟರ್ ಚಲಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಲೆ ಡಾ.ರಾಜನಂದಿನಿ ಟ್ರಾಕ್ಟರ್ ಚಲಾಯಿಸಿದರು. ಡಾ.ರಾಜನಂದಿನಿ ಅವರೊಂದಿಗೆ ಕೆಲವು ಕಾರ್ಯಕರ್ತರು ಟ್ರಾಕ್ಟರ್ನಲ್ಲಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]