ಶಿವಮೊಗ್ಗ ಲೈವ್.ಕಾಂ | SHIMOGA | 25 ಡಿಸೆಂಬರ್ 2019
ಕಂಕಣ ಸೂರ್ಯಗ್ರಹಣ ಆರಂಭವಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನರು ಕಾತುರವಾಗಿದ್ದಾರೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.


ಶಿವಮೊಗ್ಗದ SRNM ಕಾಲೇಜು ಆವರಣದಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವಿಜ್ಞಾನ ಪರಿಷತ್ ವತಿಯಿಂದ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು, ನಾಗರೀಕರು ವಿಶೇಷ ಕನ್ನಡಕದ ಮೂಲಕ ಗ್ರಹಣದ ವೀಕ್ಷಣೆ ಮಾಡುತ್ತಿದ್ದಾರೆ.
ಶಿವಮೊಗ್ಗದಲ್ಲಿ ಆವರಿಸಿದ ಕತ್ತಲು
ಸೂರ್ಯ ಗ್ರಹಣದ ಪ್ರಭಾವದಿಂದಾಗಿ ಶಿವಮೊಗ್ಗದಲ್ಲಿ ಬೆಳಗ್ಗೆ 9 ಗಂಟೆ ಹೊತ್ತಿಗೆ ಸ್ವಲ್ಪ ಕತ್ತಲು ಆವರಿಸಿದೆ. 9.30ರ ಹೊತ್ತಿಗೆ ಗ್ರಹಣ ಗೋಚರಿಸಲಿದೆ.

ದೇವಸ್ಥಾನಗಳು ಬಂದ್
ಗ್ರಹಣದ ಹಿನ್ನೆಲೆ ಶಿವಮೊಗ್ಗದ ದೇವಸ್ಥಾನಗಳ ಬಂದ್ ಮಾಡಲಾಗಿದೆ. ಪ್ರಮುಖ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿದೆ. ಗ್ರಹಣ ಮುಗಿದ ಬಳಿಕ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿದೆ.

ಗ್ರಹಣ ಕಾಲದ ಹೋಮ
ಗ್ರಹಣದ ದೋಷ ಮುಕ್ತಿಗೆ ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಹೋಮ ಮಾಡಲಾಗುತ್ತಿದೆ. ಶಿವಮೊಗ್ಗ ವಿನೋಬನಗರದ ಶನಿಮಹಾತ್ಮ ಸ್ವಾಮಿ ದೇವಸ್ಥಾನದಲ್ಲಿ ಗ್ರಹಣ ಕಾಲದಲ್ಲಿ ಹೋಮ ನಡೆಸಲಾಗುತ್ತಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]