ಶಿವಮೊಗ್ಗ ಲೈವ್.ಕಾಂ | THIRTHAHALLI | 26 ಡಿಸೆಂಬರ್ 2019
ಎಳ್ಳಮವಾಸ್ಯೆ ಜಾತ್ರೆ ಅಂಗವಾಗಿ ಇತ್ತು ತುಂಗಾ ನದಿಯ ರಾಮಕುಂಡದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿದರು. ಸಾವಿರಾರು ಭಕ್ತರು ತೀರ್ಥ ಸ್ನಾನ ಮಾಡಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.
ರಾಮಕುಂಡಕ್ಕೆ ತೀರ್ಥ ಸ್ನಾನಕ್ಕೆ ಬರಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ರಾಮಕುಂಡದವರೆಗೆ ಬರಲು ಎರಡು ಬದಿಯಲ್ಲೂ ಹಗ್ಗದ ಕಟ್ಟಲಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
ರಾಮಕುಂಡದಲ್ಲಿ ತೀರ್ಥ ಸ್ನಾನಕ್ಕೇನು ಕಾರಣ?
ಮಾತೃ ಹತ್ಯೆ ಶಾಪಕ್ಕೆ ತುತ್ತಾಗಿದ್ದ ಪರಶುರಾಮ, ಇದರಿಂದ ವಿಮೋಚನೆಗೊಂಡ ಸ್ಥಳ ರಾಮಕೊಂಡ ಎಂಬ ನಂಬಿಕೆ ಇದೆ. ಇಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಆಗಲಿದೆ ಅನ್ನುವುದು ಭಕ್ತರ ವಿಶ್ವಾಸ. ಈ ಹಿನ್ನೆಲೆಯಲ್ಲಿ ಪ್ರತಿ ಎಳ್ಳಮವಾಸ್ಯೆ ಸಂದರ್ಭದಲ್ಲೂ ದೊಡ್ಡ ಸಂಖ್ಯೆಯ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ, ಪುಣ್ಯ ಸ್ಥಾನ ಮಾಡುತ್ತಾರೆ. ಈ ಬಾರಿ ಕಂಕಣ ಸೂರ್ಯ ಗ್ರಹಣವು ಇದ್ದಿದ್ದರಿಂದ, ಗ್ರಹಣ ಮೋಕ್ಷದ ಬಳಿಕ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬಂದು ತೀರ್ಥ ಸ್ನಾನ ಮಾಡಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
