ಶಿವಮೊಗ್ಗ ಲೈವ್.ಕಾಂ | SHIMOGA | 28 ಸೆಪ್ಟೆಂಬರ್ 2019

ಶರಾವತಿ ಕಣಿವೆಯ ಭೂಗರ್ಭದಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸಲು ಸರ್ಕಾರ ಯೋಜಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ನಡುವೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ವಿದ್ಯುತ್ ಉತ್ಪಾದನೆ ಯೋಜನೆಗೆ ಯಾರು ವಿರೋಧ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಿಷ್ಟು
ಅರಣ್ಯ ನಾಶವಾಗುತ್ತದೆ ಎಂದು ವಿದ್ಯುತ್ ನಿಲ್ಲಿಸಲು ಸಾಧ್ಯವಿಲ್ಲ. ಹಾಗೆಯೆ ವಿದ್ಯುತ್ ಉತ್ಪಾದನೆಗಾಗಿ ಅರಣ್ಯ ನಾಶ ಮಾಡುವುದು ಸರಿಯಲ್ಲ. ಅರಣ್ಯ ನಾಶವು ಆಗಬಾರದು. ವಿದ್ಯುತ್ ಉತ್ಪಾದನೆಯು ಆಗಬೇಕು. ಈ ನಿಟ್ಟಿನಲ್ಲಿ ತಜ್ಞರ ಜೊತೆ ಚರ್ಚಿಸಿ ಬಳಿಕ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ.
ದೇಶಾದ್ಯಂತ ಹಲವು ಗ್ರಾಮಗಳು ಕಗ್ಗತ್ತಲಲ್ಲಿ ಇದ್ದಾವೆ. ದೀಪದ ಕೆಳಗೆ ಕತ್ತಲು ಎಂಬಂತೆ ಶರವಾತಿ ಮುಳುಗಡೆ ಸಂತ್ರಸ್ತರು ವಿದ್ಯುತ್ ಇಲ್ಲ. ಹಾಗಾಗಿ ವಿದ್ಯುತ್ ಉತ್ಪಾದನೆಗೆ ಯಾರೂ ಅಡ್ಡಿಪಡಿಸಬಾರದು ಎಂದರು.
