ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 23 ಸೆಪ್ಟೆಂಬರ್ 2019

ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ.ಕಾಂತೇಶ್ ಸ್ಪರ್ಧಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಇದನ್ನು ಸಚಿವ ಕೆ.ಎಸ್.ಈಶ್ವರಪ್ಪ ತಿರಸ್ಕರಿಸಿದ್ದಾರೆ.

ಪುತ್ರ ಕಾಂತೇಶ್ ಅವರನ್ನು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಕಣಕಿಳಿಸಲಾಗುತ್ತಿದೆ ಎಂದು ಸುದ್ದಿ ಹಾರಿದಾಡುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಿವಮೊಗ್ಗದಲ್ಲಿ ಉತ್ತರ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ಕಾಂತೇಶ್ ಅವರನ್ನು ಅಭ್ಯರ್ಥಿಯಾಗಿಸುವ ಕುರಿತು ಶೇ.1ರಷ್ಟು ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲಕ್ಕು ಉತ್ತರ ಕೊಡಲು ಆಗುವುದಿಲ್ಲ
ಕಾಂತೇಶ್ ಅವರನ್ನು ರಾಣೆಬೆನ್ನೂರಿನಲ್ಲಿ ನಿಲ್ಲಿಸುವ ಯೋಚನೆ ನನ್ನಲ್ಲಿಲ್ಲ. ಯಾರೋ ಫೇಸ್’ಬುಕ್ ಪೇಜ್ ಮಾಡಿದ್ದಾರೆ. ಅದರಲ್ಲಿ ಏನೇನೊ ಬರುತ್ತವೆ. ಅದಕ್ಕೆಲ್ಲ ಉತ್ತರ ಕೊಡಲು ಆಗುವುದಿಲ್ಲ. ಕಾರ್ಯಕರ್ತರು, ಜನರ ಅಭಿಪ್ರಾಯಗಳಿರುತ್ತವೆ. ಆದರೆ ಶೇ.1ರಷ್ಟು ಇಂತಹ ಯೋಚನೆ ಮಾಡಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]