ಶಿವಮೊಗ್ಗ ಲೈವ್.ಕಾಂ | SHIMOGA | 3 ಜನವರಿ 2020
ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ಮಾಡಿರುವ ಟ್ವೀಟ್ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಾಮನ್ ಸೆನ್ಸ್ ಇಲ್ಲ ಎಂದು ಟೀಕಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, ಮುಖ್ಯಮಂತ್ರಿ ಆಗಿದ್ದವರಿಗೆ ಪ್ರಧಾನ ಮಂತ್ರಿ ಅವರ ಬಗ್ಗೆ ಹೇಗೆ ಮಾತನಾಡಬೇಕು, ಯಾವ ಪದ ಬಳಕೆ ಮಾಡಬೇಕು ಅಂತ ಗೊತ್ತಿಲ್ಲ. ಯಾರಿಗೆ ಆಗಲಿ ಮಾತನಾಡಲು ಒಂದು ಭಾಷೆ ಇದೆ. ದೇಶದಲ್ಲಿ ಜಲ ಪ್ರಳಯ ಆಗಿದೆ. ರಾಜ್ಯಕ್ಕೆ ಸಾಕಷ್ಟು ಹಣ ಬಂದಿದೆ. ಇನ್ನೂ ಹಣ ಬರಬೇಕಿದೆ. ಹಣ ಬಿಡುಗಡೆ ಮಾಡಬೇಕು ಅಂತ ನಾವು ಪ್ರಧಾನ ಮಂತ್ರಿಯವರನ್ನು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ಎಷ್ಟು ಹಣ ಕೊಟ್ಟಿದೆ ಗೊತ್ತು
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲು ಬರ ಬಂದಿತ್ತು. ಆಗ ಕೇಂದ್ರದ ಕಾಂಗ್ರೆಸ್ ಸರ್ಕಾರ ಎಷ್ಟು ಹಣ ನೀಡಿತ್ತು ಅಂತಾ ಗೊತ್ತಿದೆ. ನಾವು ಕೂಡ ಹಿಂದೆ ಹಣಕ್ಕಾಗಿ ಒತ್ತಾಯ ಮಾಡಿದ್ದೇವೆ. ಈ ರೀತಿಯ ಪದಗಳನ್ನು ಬಳಸಿರಲಿಲ್ಲ. ಈಗ ಕಾಂಗ್ರೆಸ್’ನವರಿಗೆ ಅದರಲ್ಲೂ ಸಿದ್ದರಾಮಯ್ಯನವರಿಗೆ ನಿರಾಸೆ ಮೂಡಿದೆ. ಅವರು ಸರ್ಕಾರ ಕಳೆದುಕೊಂಡರು. ಸಿಎಂ ಸ್ಥಾನ ಕಳೆದು ಕೊಂಡರು. ಮುಂದೆ ಅಧಿಕಾರ ಸಿಗುತ್ತದೆಯೂ ಇಲ್ಲವೋ ಅಂತಾ ಅವರಿಗೆ ಬೇಸರ ಮೂಡಿದೆ. ಇದಕ್ಕೆ ಅವರು ಒಳ್ಳೆಯ ಭಾಷೆ ಬಳಸುತ್ತಿಲ್ಲ ಎಂದರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ.
— Siddaramaiah (@siddaramaiah) January 2, 2020
ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ.
ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ @narendramodi ಅವರೇ, ನಿಮ್ಮನ್ನು ಆ ಪವಿತ್ರ ನೆಲ ಕ್ಷಮಿಸದು.
ಸಿದ್ದರಾಮಯ್ಯ ಬಳಸಿದ ಪದಕ್ಕೆ ಖಂಡನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಬಗ್ಗೆ ಸಿದ್ದರಾಮಯ್ಯನವರು ಬಳಸಿರುವ ಪದವನ್ನು ನಾನು ಖಂಡಿಸುತ್ತೇನೆ. ನಾವು ದೇವರನ್ನು ಧರ್ಮವನ್ನು ನಂಬಿದ್ದೇವೆ. ಅದಕ್ಕೆ ವಿಭೂತಿ, ರುದ್ರಾಕ್ಷಿ ಹಾಕಿಕೊಳ್ಳುತ್ತೇವೆ. ಇದಕ್ಕೆ ನೀವು ಟೀಕೆ ಮಾಡುವುದು ಸರಿಯಲ್ಲ. ನಿಮಗೆ ದೇವರ ಬಗ್ಗೆ, ಧರ್ಮದ ಬಗ್ಗೆ ನಂಬಿಕೆ ಇಲ್ಲ. ನಮಗೆ ನಂಬಿಕೆ ಇದೆ. ನಾವು ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ದೇಶವನ್ನು ಉದ್ಧಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]