ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 DECEMBER 2022
ಶಿವಮೊಗ್ಗ : ಅಪ್ರಾಪ್ತರ ಕೈಗೆ ವಾಹನ ಕೋಟ್ಟರೆ ಪೋಷಕರು ಭಾರಿ ದಂಡ (fine and jail) ಕಟ್ಟಬೇಕಾಗುತ್ತದೆ. ಅಷ್ಟೆ ಅಲ್ಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳು ಕಾಲೇಜಿಗೆ ವಾಹನ ತಂದರೆ ಪ್ರಾಂಶುಪಾಲರೆ ಹೊಣೆಗಾರರಾಗುತ್ತಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಇದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುಗಮ ಸಂಚಾರ ಕುರಿತ ಸಭೆಯಲ್ಲಿ ಆರ್.ಟಿ.ಒ ಅಧಿಕಾರಿ ಗಂಗಾಧರ್ ನೀಡಿದ ಎಚ್ಚರಿಕೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
(fine and jail)
ವಾಹನ ಸೀಜ್ ಮಾಡಿದ್ದೇವೆ
ಕಳೆದ ವಾರ ಶಿವಮೊಗ್ಗ ಆರ್.ಟಿ.ಒ ಕಚೇರಿ ಮುಂಭಾಗ ಬೈಕಿನಲ್ಲಿ ಬಂದ ಇಬ್ಬರನ್ನು ಆರ್.ಟಿ.ಒ ಅಧಿಕಾರಿ ಗಂಗಾಧರ್ ಅವರು ತಡೆದು ವಯಸ್ಸು ವಿಚಾರಿಸಿದ್ದಾರೆ. ಇಬ್ಬರು ಅಪ್ರಾಪ್ತರಾಗಿದ್ದು, ಕೂಡಲೆ ಬೈಕನ್ನು ಸೀಜ್ ಮಾಡಿದ್ದಾರೆ.
‘ಈಗ ಅವರ ಪೋಷಕರು ವಾಹನ ಬಿಟ್ಟುಕೊಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ದಂಡ ಕಟ್ಟದೆ ವಾಹನ ಬಿಡಲು ಸಾಧ್ಯವಿಲ್ಲ’ ಎಂದು ಸಭೆಗೆ ತಿಳಿಸಿದರು.
(fine and jail)
ತೀರ್ಥಹಳ್ಳಿ ಪ್ರಕರಣದ ಉದಹಾರಣೆ
ಇದೆ ವೇಳೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ಅಪ್ರಾಪ್ತನ ಕೈಗೆ ಬೈಕು ಕೊಟ್ಟ ಪೋಷಕರಿಗೆ ದಂಡ ಮತ್ತು ಜೈಲು ಶಿಕ್ಷೆಯಾಗುತ್ತದೆ. ತೀರ್ಥಹಳ್ಳಿಯ ಒಂದು ಪ್ರಕರಣದಲ್ಲಿ ಪೋಷಕರು ಶಿಕ್ಷೆ ಅನುಭವಿಸುತ್ತಿದ್ದಾರೆ. ಅಪ್ರಾಪ್ತರ ಕೈಗೆ ವಾಹನ ಕೊಟ್ಟರೆ ಮೊದಲು 25 ಸಾವಿರ ರೂ. ದಂಡ ಕಟ್ಟಬೇಕು. ಆ ಬಳಿಕ ಜೈಲು ಶಿಕ್ಷೆಯಾಗಲಿದೆ ಎಂದು ಎಚ್ಚರಿಸಿದರು.
ಪ್ರಾಂಶುಪಾಲರಿಗು ತಟ್ಟಲಿದೆ ಬಿಸಿ
ಪಿಯುಸಿ, ಪದವಿ ಮೊದಲ ವರ್ಷದ ವಿದ್ಯಾರ್ಥಿಗಳು ಕಾಲೇಜಿಗೆ ಬೈಕುಗಳನ್ನು ತರುತ್ತಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಗಳು ಕಾಲೇಜಿಗೆ ವಾಹನಗಳನ್ನು ತಂದರೆ ಪ್ರಾಂಶುಪಾಲರೆ ಹೊಣೆಯಾಗುತ್ತಾರೆ. ಇಂತಹ ಸಂದರ್ಭ ಪ್ರಾಂಶುಪಾಲರ ವಿರುದ್ಧವು ಪ್ರಕರಣ ದಾಖಲಿಸಬಹುದಾಗಿದೆ ಎಂದು ಆರ್.ಟಿ.ಒ ಅಧಿಕಾರಿ ಗಂಗಾಧರ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ – ಶಿವಮೊಗ್ಗದ 5 ಪ್ರಮುಖ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರ ನಿಷೇಧ ಸಾಧ್ಯತೆ, ಕಾರಣವೇನು?
ಥ್ರಿಬಲ್ ರೈಡಿಂಗ್ ಮಟ್ಟ ಹಾಕಿ
ಸಹ್ಯಾದ್ರಿ ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಡಾ. ವೀಣಾ ಅವರು ಮಾತನಾಡಿ, ತಮ್ಮ ಕಾಲೇಜು ಬಳಿ ಥ್ರಿಬಲ್ ರೈಡಿಂಗ್ ಹಾವಳಿ ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿಗಳೆ ಬೈಕಿನಲ್ಲಿ ಮೂವರು ಸಂಚರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.