ಶಿವಮೊಗ್ಗ ಲೈವ್.ಕಾಂ | SORABA | 21 ಡಿಸೆಂಬರ್ 2019
ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸಾರ್ವಜನಿಕರ ತೆರಿಗೆ ಹಣವಾಗಿದ್ದು, ಗುಣಮಟ್ಟದ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 4.73 ಕೋಟಿ ರೂ. ವೆಚ್ಚದ ಗ್ರಂಥಾಲಯ, ಹೆಚ್ಚುವರಿ ಕೊಠಡಿ, ಶೌಚಗೃಹ, ವಿಶ್ರಾಂತಿ ಕೊಠಡಿ ಹಾಗೂ ಆಡಿಟೋರಿಯಂ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಆಗಬೇಕಾದ ಕೆಲಸಗಳನ್ನು ಕೈಗೊಳ್ಳುವ ಮೊದಲು ಮುಂದಿನ ಪೀಳಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳ ರೂಪುರೇಷೆ ತಯಾರಿಸಬೇಕು. ಅಗತ್ಯ ಅನುದಾನ ತರುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಚಿಂತನೆ ಹೊಂದಿದಾಗ ಮಾತ್ರ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕಾಮಗಾರಿಗೆ ಇಲ್ಲಿನ ಪದವಿ ಕಾಲೇಜನ್ನು ದೊಡ್ಡ ಗುದ್ದಲಿಪೂಜೆ ನಗರದ ಕಾಲೇಜುಗಳಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಒತ್ತುತಿ ನೀಡಲಾಗುವುದು ಎಂದರು.
ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ವಿದ್ಯಾರ್ಥಿಗಳ ಪ್ರತಿನಿತ್ಯದ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಲೇಜು ಆವರಣದಲ್ಲಿ ಕ್ಯಾಂಟೀನ್, ಶುದ್ಧ ಕುಡಿಯುವ ನೀರು, ಸೈಕಲ್ ಸ್ಟಾಂಡ್ ಸೇರಿ ವಿವಿಧ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಪ್ರಾಚಾರ್ಯೆ ಸೀಮಾ ಕೌಸರ್ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯರಾದ ಎಂ.ಡಿ.ಉಮೇಶ್, ಮಧುರಾಮ್ ಜಿ. ಶೇಟ್, ಈರೇಶ್ ಮೇಸ್ತ್ರಿ, ಪ್ರಭು, ನಟರಾಜ್, ಹಸೀನಾ ಬೇಗಂ,

ವಿರೂಪಾಕ್ಷಪ್ಪ ಗೌಳಿ, ಮಂಜುಳಾ, ಹೂವಪ್ಪ, ಶರಣಪ್ಪ, ಗಣೇಶ್, ಹರೀಶ್, ಶಾಂತನಗೌಡ, ಉಪನ್ಯಾಸಕಾರದ ಶೈಲಜಾ, ಚಂದ್ರಪ್ಪ, ಬಸವರಾಜಪ್ಪ, ಮಧುರಾ, ದಿಲೀಪ್, ರವಿ ಇದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]