ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 23 ಸೆಪ್ಟೆಂಬರ್ 2019

ರಾಜ್ಯಮಟ್ಟದ ನಾಯಕರೆನಿಸಿಕೊಳ್ಳುವ ಸಲುವಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಈಶ್ವರಪ್ಪ ಪದೆ ಪದೆ ನಿಂದಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರಸನ್ನಕುಮಾರ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನಕುಮಾರ್, ಅಭಿವೃದ್ದಿ ವಿಚಾರವಾಗಿ ಸುದ್ದಿಯಾಗುವ ಬದಲು ಪ್ರತಿದಿನ ಬೈದು ಸುದ್ದಿಯಾಗುತ್ತಿದ್ದಾರೆ ಈಶ್ವರಪ್ಪ ಎಂದು ವ್ಯಂಗ್ಯವಾಡಿದರು.
ಬಸ್ಸಲ್ಲಿ ಕರೆದೊಯ್ದವರಿಗೆ ಹಕ್ಕು ಪತ್ರ ಕೊಡಿಸಿ
ಹಕ್ಕುಪತ್ರ ಕೊಡಿಸುವಂತೆ ಈಶ್ವರಪ್ಪ ಅವರು ಶಿವಮೊಗ್ಗದ ಜನರನ್ನು ಬಸ್ಸುಗಳಲ್ಲಿ ಬೆಂಗಳೂರಿಗೆ ಕರೆದೊಯ್ದು, ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಈಗ ಅದರ ಕುರಿತು ಈಶ್ವರಪ್ಪ ಅವರು ಮಾತಾಡುತ್ತಿಲ್ಲ. ಅವತ್ತು ಬಸ್ಸಿನಲ್ಲಿ ಕರೆದೊಯ್ದವರಿಗೆ ಈಗಲಾದರು ಹಕ್ಕು ಪತ್ರ ಕೊಡಿಸಲಿ. ಇನ್ನು, ಆಶ್ರಯ ಸಮಿತಿಗೆ ಈವರೆಗೆ ಒಂದು ಸಭೆ ಮಾತ್ರ ಮಾಡಲಾಗಿದೆ. ಕ್ಷೇತ್ರದಲ್ಲಿ ಯಾವುದೆ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ ಎಂದು ಪ್ರಸನ್ನಕುಮಾರ್ ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
