
ಶಿವಮೊಗ್ಗ ಲೈವ್.ಕಾಂ | BHADRAVATHI | 25 ಏಪ್ರಿಲ್ 2020
ಬಾರ್ನಲ್ಲಿ ಮದ್ಯ ಕಳ್ಳತನ ಮಾಡಿದ್ದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 20 ಸಾವಿರ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ತಾಲೂಕು ಡಿ.ಜಿ.ಹಳ್ಳಿ ತಾಂಡದ ಸೋಮಶೇಖರ್ ಅಲಿಯಾಸ್ ಪಂದಿ (29), ಮಣಿಕಂದನ್ ಅಲಿಯಾಸ್ ಮಣಿಕಂಠ (27), ಆನಂದ ಅಲಿಯಾಸ್ ಹೊಟ್ಟೆ (28), ರಾಜಾನಾಯ್ಕ ಅಲಿಯಾಸ್ ಗುಂಡ (19) ಎಂಬುವವರನ್ನು ಬಂಧಿಸಲಾಗಿದೆ.
ಏಪ್ರಿಲ್ 16ರಂದು ರಾತ್ರಿ ಬಾರಂದೂರು ಗ್ರಾಮದ ವೈನ್ ಶಾಪ್ ಒಂದರಲ್ಲಿ ಕಳ್ಳತನ ಆಗಿತ್ತು. 23 ಸಾವಿರ ರೂ ಮೌಲ್ಯದ ಮದ್ಯದ ಪೌಚುಗಳು ಕಳ್ಳತನವಾಗಿತ್ತು. ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದು, 20 ಸಾವಿರ ರೂ. ಮೌಲ್ಯದ ಮದ್ಯ ಮತ್ತು ಪಲ್ಸರ್ ಬೈಕ್ ವಶಕ್ಕೆ ಪಡೆದಿದ್ದಾರೆ.
ಡಿವೈಎಸ್ಪಿ ಸುಧಾಕರ ನಾಯಕ್, ಭದ್ರಾವತಿ ಗ್ರಾಮಾಂತರ ಇನ್ಸ್ಪೆಕ್ಟರ್ ಮಂಜುನಾಥ್, ಪೇಪರ್ ಟೌನ್ ಠಾಣೆ ಪಿಎಸ್ಐ ಭಾರತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಲಾಗಿದೆ.


ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]