ಶಿವಮೊಗ್ಗ ಲೈವ್.ಕಾಂ | THIRTHAHALLI | 16 ಡಿಸೆಂಬರ್ 2019
ಹಣಗೆರೆಕಟ್ಟೆ – ಬೆಜ್ಜವಳ್ಳಿ ಮಾರ್ಗವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 20 ಸಾವಿರ ರೂ. ಮೌಲ್ಯದ ಗಾಂಜಾ ಮತ್ತು ಸ್ಕೂಟಿ ಜಪ್ತಿ ಮಾಡಲಾಗಿದೆ.

ಶಿಕಾರಿಪುರ ತಾಲೂಕಿನ ಕಲ್ಮನೆಯ ಫಕೀರಪ್ಪ (45), ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದ ಸಿರಾಜುದ್ದೀನ್ ಜಾಫರ್ (22), ಶಿಕಾರಿಪುರ ಕೊರಮರಕೇರಿಯ ಅನಿಲ್ (21) ಬಂಧಿತರು.
ಸ್ಕೂಟಿಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ತೆರಳುವಾಗ ಭಾರತಿಪುರದ ನರ್ಸರಿಗೆ ಹೋಗುವ ರಸ್ತೆಯ ತಿರುವಿನ ಬಳಿ ಬಂಧಿಸಲಾಗಿದೆ. 1,310ಗ್ರಾಂ ಗಾಂಜಾ ಮತ್ತು 30 ಸಾವಿರ ರೂ. ಮೌಲ್ಯದ ಸ್ಕೂಟಿ ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
