SHIVAMOGGA LIVE NEWS | 2 OCTOBER 2023
SHIMOGA : ಸಂಚಾರ ಠಾಣೆ ಹೆಡ್ ಕಾನ್ಸ್ಟೇಬಲ್ (Head constable) ಒಬ್ಬರು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿನೋಬನಗರದಲ್ಲಿರುವ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ.
ಸಂಚಾರ ಠಾಣೆ ಮುಖ್ಯ ಪೇದೆ ಜಯಪ್ಪ ಉಪ್ಪಾರ್ ಮೃತರು. ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಜಯಪ್ಪ ಉಪ್ಪಾರ್ ಅವರು ವಿಶ್ರಾಂತಿಯ ಅವಧಿ ಇದ್ದಿದ್ದರಿಂದ ಮನೆಗೆ ಮರಳಿದ್ದರು. ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಕನ್ನಡಪರ ಸಂಘಟನೆ ಮುಖಂಡರು ಅರೆಸ್ಟ್, ನಗರದಲ್ಲಿ ಹೇಗಿದೆ ಕರ್ನಾಟಕ ಬಂದ್?
ಅನಾರೋಗ್ಯದಿಂದ ಬಳಲುತ್ತಿದ್ದ ಜಯಪ್ಪ ಉಪ್ಪಾರ್ ಅವರ ಪತ್ನಿ ಸೆ.28ರಂದು ಕೊನೆಯುಸಿರೆಳೆದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.